ಕರಾವಳಿ

ಸಿಪಿಐಎಂ ಪಕ್ಷದ ಅಭ್ಯರ್ಥಿ ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ನಾಮಪತ್ರ ಸಲ್ಲಿಕೆ

Pinterest LinkedIn Tumblr

ಮಂಗಳೂರು, ಆಕ್ಟೋಬರ್.31: ವಿದ್ಯಾರ್ಥಿ ಜೀವನದಿಂದಲೇ ಪ್ರಾರಂಭಗೊಂಡು ಕಳೆದ 25 ವರ್ಷಗಳಿಂದ ವಿದ್ಯಾರ್ಥಿ ಯುವಜನ ಹಾಗೂ ಕಾರ್ಮಿಕ ವರ್ಗದ ಏಳಿಗೆಗಾಗಿ ಶ್ರಮಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಜನಪರ ಹೋರಾಟಗಾರರಾದ ಸುನಿಲ್ ಕುಮಾರ್ ಬಜಾಲ್ ರವರು 40ನೇ ಕೋರ್ಟ್ ವಾರ್ಡಿನಲ್ಲಿ CPIM ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಕಳೆದ ಬಾರಿಯ ಪಕ್ಷೇತರ ಅಭ್ಯರ್ಥಿ, ಸ್ಥಳೀಯರೂ ಯುವ ನಾಯಕರಾದ ಲಿಂಕನ್ ಬಿ.ಡಿಸೋಜ, ನಗರದ ಹಿರಿಯ ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್,ಚುನಾವಣಾ ಪ್ರಚಾರ ಸಮಿತಿ ಮುಖಂಡರಾದ ಸಂತೋಷ್ ಆರ್.ಎಸ್ , ನಿತಿನ್ ಬಂಗೇರ, ಆರ್.ಎಂ.ಬಂಗೇರ, ಕ್ವೀನಿ ಪರ್ಸಿ ಆನಂದ್,ತಾರನಾಥ ಜತ್ತನ್ನ, ರಾಹುಲ್, ಪ್ರಜ್ವಲ್, ಶಾಜಿದಾ ಅತ್ತಾವರ,ಸ್ಟಾನ್ಲಿ ನೊರೋನ್ಹಾ , ರಾಮಕ್ರಷ್ಣ ಪೂಜಾರಿ, ಮಹಮ್ಮದ್ ಮುಸ್ತಾಫ, ಹರೀಶ್ ಪೂಜಾರಿ,ಆಸಿಫ್ ದೇವಿಕಾ,ಮೇರಿ ಡಿಸೋಜ,ಮುಂತಾದವರು ಭಾಗವಹಿಸಿದ್ದರು.

ಕಳೆದ ಬಾರಿಯೂ ಕೋರ್ಟ್ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಸುನಿಲ್ ಕುಮಾರ್ ಬಜಾಲ್ ರವರು ಉತ್ತಮ ಮತಗಳನ್ನು ಪಡೆದು ವಾರ್ಡಿನ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು.ಮಾತ್ರವಲ್ಲದೆ ಕಳೆದ ಆರು ವರ್ಷಗಳ ಕಾಲ ವಾರ್ಡಿನಲ್ಲಿ ಜನತೆ ಅನುಭವಿಸುತ್ತಿದ್ದ ಡ್ರೈನೇಜ್ ಅವ್ಯವಸ್ಥೆ,ಕುಡಿಯುವ ನೀರು,ರಸ್ತೆ,ಒಳಚರಂಡಿ,ಪುಟ್ ಪಾತ್ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಅನೇಕ ಯಶಸ್ವಿ ಹೋರಾಟಗಳನ್ನು ಕೈಗೊಳ್ಳುವ ಮೂಲಕ ವಾರ್ಡಿನ ಅಭಿವ್ರದ್ದಿಗೆ ಶ್ರಮಿಸಿದ್ದರು.ಆದ್ದರಿಂದ ಈ ಬಾರಿ ಸುನಿಲ್ ಕುಮಾರ್ ರವರ ಗೆಲುವು ನಿಶ್ಚಿತ ಎಂದು CPIM ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರೂ,ಬ್ಯಾಂಕ್ ನೌಕರರ ರಾಜ್ಯ ಮುಖಂಡರಾದ ಬಿ.ಎಂ.ಮಾಧವರವರು ಅಭಿಪ್ರಾಯ ಪಟ್ಟರು.

Comments are closed.