ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ : ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ

Pinterest LinkedIn Tumblr


ಮಂಗಳೂರು, ಆಕ್ಟೋಬರ್.31: ಮಂಗಳೂರು ಮಹಾನಗರ ಪಾಲಿಕೆಗೆ ನವೆಂಬರ್ 12ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ.

ನಾಮಪತ್ರಗಳನ್ನು ಪರಿಶೀಲಿಸುವ ದಿನ ನವೆಂಬರ್ 2, ಉಮೇದುವಾರರನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ನವೆಂಬರ್ 4, ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 13 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮತಗಳ ಎಣಿಕೆಯ ದಿನ ನವೆಂಬರ್ 14 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಚುನಾವಣೆಯನ್ನು ಮುಕ್ತಾಯಗೊಳಿಸಬೇಕಾದ ದಿನ ನವೆಂಬರ್ 14.

Comments are closed.