ಕರಾವಳಿ

ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ “ಡಾ.ದ.ರಾ. ಬೇಂದ್ರೆ ಪ್ರಶಸ್ತಿ ಶ್ರೀ ಮನೋಹರ್‌ತೋನ್ಸೆಯವರ ಮಡಿಲಿಗೆ

Pinterest LinkedIn Tumblr

ಅಬುಧಾಬಿ ಕರ್ನಾಟಕ ಸಂಘದ‌ಆಶ್ರಯದಲ್ಲಿ 2019 ನವೆಂಬರ್ 1ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.30ರಿಂದ‌ಅಬುಧಾಬಿ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ 64ನೇಕರ್ನಾಟಕರಾಜ್ಯೋತ್ಸವ ಸಮಾರಂಭ ನಡೆಯಲಿದೆ.

ಪ್ರತಿವರ್ಷ ನೀಡಲಾಗುತ್ತಿರುವ ಪ್ರತಿಷ್ಠಿತ “ಡಾ.ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಬಾರಿ ಸಾಹಿತ್ಯ, ಪತ್ರಿಕೋಧ್ಯಮದಲ್ಲಿ ಸಾಧನೆ ಮಾಡಿರುವ ಶ್ರೀ ಮನೋಹರ್‌ತೋನ್ಸೆಯವರಿಗೆ ಪ್ರದಾನಿಸಲಾಗುತ್ತದೆ.

ಶ್ರೀ ಮನೋಹರ್‌ತೋನ್ಸೆಯವರ ಹೆಜ್ಜೆ ಗುರುತುಗಳು…

ಭವ್ಯ ಭಾರತದ ಸುಂದರಕರ್ನಾಟಕದಕಡಲತೀರದತೋನ್ಸೆಯಲ್ಲಿ ಜನಿಸಿ ಬಡನಿಡಿಯೂರುಗಾಂಧಿ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ಪದವಿ ಎಂ.ಎ. ಕನ್ನಡ ಲಿಟರೇಚರ್, ಎಂ ಕಾಂ. ಸಿ.ಐ.ಎ. ಅಮೇರಿಕಾ, ಸಿ.ಎಸ್.ಎಸ್.ಎ. ಅಮೇರಿಕಾದಲ್ಲ್ಲಿ ಪಡೆದಿರುವ ಮನೋಹರ್‌ತೋನ್ಸೆಯವರು ಪ್ರಸ್ತುತ ಎಡಿಸಿಬಿ ಬ್ಯಾಂಕ್‌ಅಬುಧಾಬಿಯಲ್ಲಿ ಸಹಾಯಕ‌ಉಪಾಧ್ಯಕ್ಷ ಮತ್ತು ಸಿನಿಯರ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

1987-1988ರ‌ಅವಧಿಯಲ್ಲಿ ಮುಂಬೈಯಕನ್ನಡ ಮಾಸಿಕ “ಪತ್ರಪುಷ್ಪ”, “ಮೊಗವೀರ” ಮಾಸಿಕದಲ್ಲಿ ಮತ್ತು ಮಂಗಳೂರಿನಲ್ಲಿ ಪ್ರಸಾರವಾಗುತಿದ್ದ ಮುಂಗಾರು ಪತ್ರಿಕೆಯಲ್ಲಿ ಹಲವಾರು ಲೇಖನಗಳು ಪ್ರಕಟವಾಗಿದೆ.

ಅಬುಧಾಬಿಯಲ್ಲಿ ಸೇವೆಯಲ್ಲಿರುವಾಗಲೇಮಣಿಪಾಲದಲ್ಲಿಪ್ರಕಟವಾಗುತ್ತಿದ್ದ‌ ಉದಯವಾಣಿ, ರೂಪತಾರ, ಮುಂಬೈನಲ್ಲಿ ಪ್ರಕಟವಾಗುತ್ತಿದ್ದ “ಕರ್ನಾಟಕ ಮಲ್ಲ”, “ಅಕ್ಷಯ” ಮಾಸಿಕದಲ್ಲಿ ಲೇಖನಗಳು, ಸಂದರ್ಶನ ವರದಿ ನಿರಂತರವಾಗಿ ಪ್ರಕಟವಾಗಿದೆ.

ಅಬುಧಾಬಿ ಇಂಡಿಯಾ ಸೋಶಿಯಲ್ ಸೆಂಟರ್ ನಲ್ಲಿ 1996ರಲ್ಲಿ‌ಅಂಗ್ಲ ಭಾಷೆಯ ವಾರ್ತಾಸಂಚಿಕೆಯ ಸಂಪಾದಕರಾಗಿ, ಸಾಹಿತ್ಯ ಮತ್ತು ಕಲಾ ವಿಭಾಗದಲ್ಲಿ೩ ವರ್ಷಗಳ ಕಾಲ ಸಮಿತಿಯ ಸದಸ್ಯರಾಗಿ,2003ರಲ್ಲಿಗೌರವಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.

ದುಬಾಯಿಕರ್ನಾಟಕ ಸಂಘದ “ಚಂದನ” ವಾರ್ತಾ ಪತ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಕಾಶ್‌ರಾವ್ ಪಯ್ಯಾರ್‌ರವರು ಲೋಕಾರ್ಪಣೆ ಗೊಳಿಸಿರುವ “ತಾರೆ ಎಣಿಸಿ ಮೊತ್ತ ಹೇಳಿ”, “ಕನ್ನಡ ನಾಡು ನುಡಿರಕ್ಷಣೆಯಾಕೆ ಮತ್ತು ಹೇಗೆ” ಮತ್ತು ಶ್ರೀಮತಿ ರಂಜನಿ ಸುರೇಶ್‌ರವರ “ಕಂಠಿ ಸರ ಮತ್ತು‌ಇತರ ಕಥೆಗಳು” ಈ ಕೃತಿಗಳ ವಿಮರ್ಶೆಯನ್ನು ಮಂಡಿಸಿದ್ದಾರೆ.

ಬೆಂಗಳೂರು ಜ್ಞಾನ ಮಂದಾರ‌ಅಕಾಡೆಮಿಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಬುಧಾಬಿ ಕರ್ನಾಟಕ ಸಂಘದಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಹಲವು ವರ್ಷಗಳಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ಸಮಸ್ಥ ಕನ್ನಡಿಗರ ಮನಗೆದ್ದಿದ್ದಾರೆ.

1994ರಲ್ಲಿ ಪ್ರಾರಂಭವಾದ ಬಿಲ್ಲವರ ಬಳಗ ಅಬುಧಾಬಿ ಸ್ಥಾಪಕರಾಗಿ ಹಾಗೂ ಮುಖ್ಯ ಸಂಘಟಕರಾಗಿ ಸೇವೆ ಸಲ್ಲಿಸುತಿದ್ದಾರೆ. ಬಿಲ್ಲವರ ಬಳಗ ಅಬುಧಾಬಿ ಈ ವರ್ಷರಜತ ಮಹೋತ್ಸವ‌ಆಚರಣೆಯ ಸಂಭ್ರಮದಲ್ಲಿದೆ.

ಪ್ರಶಸ್ತಿ ಸನ್ಮಾನ ಗೌರವಗಳು

ಮನೋಹರ್‌ತೋನ್ಸೆಯವರಕನ್ನಡ ಭಾಷೆ, ಸಾಹಿತ್ಯ, ಪತ್ರಿಕೋಧ್ಯಮ, ಸಮಾಜ ಸೇವೆಯಲ್ಲಿ ಮಾಡಿರುವ ಸಾಧನೆಗೆ ಸಂದಿರುವ ಪ್ರಶಸ್ತಿ ಸನ್ಮಾನ ಗೌರವಗಳು.

ಬೆಂಗಳೂರು ಕಾಶಿ ವಿಶ್ವೇಶ್ವರಟ್ರಸ್ಟ್‌ಆಶ್ರಯದಲ್ಲಿಜ್ಞಾನ ಮಂದಾರ ಹಾಗೂ ಸಾಂಸ್ಕೃತಿಕ ಸಂಸ್ಥೆಯಿಂದ “ಸುವರ್ಣಕನ್ನಡಿಗ -೨೦೦೬” ಪ್ರಶಸ್ತಿ.

ಮುಂಬೈ ನ ಇಂಡಿಯಾ‌ಇಂಟರ್ನ್ಯಾಶನಲ್ ಫ್ರೆಂಡ್ಶಿಫ್ ಸೋಸೈಟಿ “ಇಂದಿರಾಪ್ರಿಯದರ್ಶಿನಿಪ್ರಶಸ್ತಿ-2006”
ಬೆಂಗಳೂರು – ಸ್ಪೂರ್ತಿಚಾರಿಟೇಬಲ್ ಟ್ರಸ್ಟ್- “ಸುವರ್ಣರತ್ನ -2007” ಪ್ರಶಸ್ತಿ
ಕರ್ನಾಟಕ ಸಂಘ ಮುಂಬೈ ಮತ್ತುಜ್ಞಾನ ಮಂದಾರ‌ಅಕಾಡೆಮಿ‌ಆಶ್ರಯದಲ್ಲಿ ನಡೆದ ವಚನ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ “ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ -2008″
ಹೃದಯವಾಹಿನಿ- ಗಲ್ಫ್ ಬ್ಯಾಂಕರ್ ಪ್ರಶಸ್ತಿ – 2011
ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಸಂಯುಕ್ತ‌ಆಶ್ರಯದಲ್ಲಿ2019ರಲ್ಲಿ ನಡೆದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ – ” ವಿಶ್ವ ಮಾನ್ಯಕನ್ನಡಿಗ ಪ್ರಶಸ್ತಿ – 2019″

ಹಾರ್ದಿಕ ಅಭಿನಂದನೆ:

ಧರ್ಮ ಪತ್ನಿ ಶ್ರೀಮತಿ ಪೂರ್ಣಿಮಾ ಪುತ್ರಿಯರು ಕು. ಮೈತ್ರಿ ಮತ್ತು ಕು. ಮುಕ್ತಿಕಾ ರೊಂದಿಗೆ ಸುಖೀ ಸಂಸಾರಿಯಾಗಿರುವಶ್ರೀಯುತ ಮನೋಹರ್‌ತೋನ್ಸೆಯವರ ಕನ್ನಡ ಭಾಷೆ ಮತ್ತು ಸಾಹಿತ್ಯ ಪತ್ರಿಕೋಧ್ಯಮರಂಗದಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಅಬುಧಾಬಿ ಕರ್ನಾಟಕ ಸಂಘ ಕೊಡ ಮಾಡುವದ. ರಾ. ಬೇಂದ್ರೆ ಪ್ರಶಸ್ತಿಯನ್ನು ಪಡೆಯುತ್ತಿರುವ ಈ ಸಂದರ್ಭದಲ್ಲಿ ಸಮಸ್ಥ ಅನಿವಾಸಿ ಕನ್ನಡಿಗರಪರವಾಗಿ ಹಾರ್ದಿಕ ಅಭಿನಂದನೆಗಳು.

ಬಿ. ಕೆ. ಗಣೇಶ್‌ರೈ
ಯು.ಎ.ಇ.

Comments are closed.