ಕರಾವಳಿ

ಯುವತಿಯರನ್ನು ಚುಡಾಯಿಸುವ ಹಾಗೂ ಪ್ರಶ್ನಿಸಿದಾಗ ಹಲ್ಲೆ‌ ನಡೆಸುವ ಪ್ರಕರಣಗಳನ್ನು ಸಹಿಸಲು ಸಾಧ್ಯವಿಲ್ಲ : ನಳೀನ್ ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.26: ಯುವತಿಯರನ್ನು ಚುಡಾಯಿಸುವ ಹಾಗೂ ಪ್ರಶ್ನಿಸಿದಾಗ ಹಲ್ಲೆ‌ ನಡೆಸುವ ಪ್ರಕರಣಗಳನ್ನು ಸಹಿಸಲು ಬಿಜೆಪಿ ಸರ್ಕಾರದಲ್ಲಿ ಅವಕಾಶವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಮಂಗಳೂರಿನ ಖಾಸಗಿ ಮಾಲ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ‘ಫೋರಮ್ ಮಾಲ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಯುವತಿಯರನ್ನು ಚುಡಾಯಿಸುವ ಹಾಗೂ ಪ್ರಶ್ನಿಸಿದಾಗ ಹಲ್ಲೆ‌ ನಡೆಸುವ ಪ್ರಕರಣಗಳನ್ನು ಸಹಿಸಲು ಬಿಜೆಪಿ ಸರ್ಕಾರದಲ್ಲಿ ಅವಕಾಶವಿಲ್ಲ. ಮತಾಂಧರನ್ನು ಮಟ್ಟ ಹಾಕಲು ಸರ್ಕಾರ ಬದ್ದವಾಗಿದೆ ಎಂದು ಆಶ್ವಾಸನೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಪ್ರಚೋದನಾತ್ಮಕವಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ ನಗರದ ಖಾಸಗಿ ‘ಮಾಲ್’ವೊಂದರಲ್ಲಿ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಒಟ್ಟು 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.