ಕರಾವಳಿ

ಸಾಸ್ತಾನ ಟೋಲ್ ಗೇಟ್ ಸಿಬ್ಬಂದಿ ಪ್ರತಿಭಟನೆ- ಸುಂಕವಿಲ್ಲದೇ ವಾಹನಗಳ ಓಡಾಟ!

Pinterest LinkedIn Tumblr

ಉಡುಪಿ: ಸಾಸ್ತಾನ ಬಳಿಯ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹಿಸುವ ಕಾರ್ಮಿಕರು ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿ ಸರಿಯಾಗಿ ವೇತನ ನೀಡದೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

(ಸಂಗ್ರಹ ಚಿತ್ರ)

ಟೋಲ್ ಸಿಬ್ಬಂದಿಗಳು ಸುಂಕ ಸಂಗ್ರಹಿಸದ್ದರಿಂದ ಸ್ಥಳಿಯ ವಾಹನಗಳು ಸಹಿತ ಎಲ್ಲಾ ವಾಹನಗಳು ಟೋಲ್ ನೀಡದೆ ಉಚಿತವಾಗಿ ಓಡಾಟ ನಡೆಸಿದವು.

ಕಳೆದ ತಿಂಗಳಿನಲ್ಲಿಯೂ ಕೂಡ ಸಿಬ್ಬಂದಿಗಳು ವೇತನ ನೀಡುವಲ್ಲಿ ವಿಳಂಬ ಹಾಗೂ ಪಿ.ಎಫ್. ಕುರಿತು ಗೊಂದಲವಿರುವುದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಈ ಬಾರಿಯೂ ಸುಮಾರು ಎರಡು ಗಂಟೆ ಕಾಲ ಪ್ರತಿಭಟನೆ ನಡೆದಿತ್ತು.

Comments are closed.