ಕರಾವಳಿ

ಬಂಟ್ಸ್ ಹಾಸ್ಟೇಲ್‌ನಲ್ಲಿ ಸಾಂಸ್ಕೃತಿಕ ಕಲೋತ್ಸವ – ಸುರತ್ಕಲ್ ಬಂಟರ ಸಂಘಕ್ಕೆ ರನ್ಸರ್ ಅಪ್ ಪ್ರಶಸ್ತಿ

Pinterest LinkedIn Tumblr

ಮಂಗಳೂರು/ ಸುರತ್ಕಲ್ : ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ನಡೆದ ಭಾರತೋತ್ಸವ ಭವಿಷ್ಯದ ಭಾರತ-ಬಂಟರು ಕಂಡಂತೆ’ ಸಾಂಸ್ಕೃತಿಕ ಕಲೋತ್ಸವದಲ್ಲಿ ಸುರತ್ಕಲ್ ಬಂಟರ ಸಂಘ ಪ್ರಸ್ತುತ ಪಡಿಸಿದ `ದೇಶ ಭಕ್ತಿ’ ಪ್ರಹಸನವು ರನ್ಸರ್‍ಸ್ ಅಪ್ ಪ್ರಶಸ್ತಿಯೊಂದಿಗೆ 30 ಸಾವಿರ ರೂಪಾಯಿ ನಗದನ್ನು ಗೆದ್ದುಕೊಂಡಿದೆ.

ಎರಡು ತಿಂಗಳ ಮಗುವಿನಿಂದ 75ರ ಹರೆಯದವರೆಗೆ ಸುಮಾರು 60 ಮಂದಿ ಕಲಾವಿದರು `ದೇಶಭಕ್ತಿ’ ಪ್ರಹಸನದಲ್ಲಿ ಭಾಗವಹಿ ಸಿದ್ದರು. ಕಾಶ್ಮೀರದ ಉರಿ ಪ್ರದೇಶದಲ್ಲಿ ಭಾರತೀಯ ಯೋಧರು ಉಗ್ರರ ಜತೆ ನಡೆಸಿದ ಹೋರಾಟ ಮತ್ತು ಅದರಲ್ಲಿ ಜಯಶಾಲಿ ಯಾಗುವುದನ್ನು ದೇಶ ಭಕ್ತಿ ಪ್ರಹಸನದಲ್ಲಿ ನಿರೂಪಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಹಸನದಲ್ಲಿ ಉತ್ತಮ ನಟನೆಗೆ ಚಂದ್ರಕಲಾ ರೈ ಚೇಳಾರ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿಯ ಜತೆಗೆ ಸುರತ್ಕಲ್ ಬಂಟರ ಸಂಘಕ್ಕೆ ರನ್ಸರ್‍ಸ್ ಅಪ್ ಪ್ರಶಸ್ತಿ ಲಭಿಸಿತು. ತಂಡವು ನಿರಂತರ ಒಂದು ತಿಂಗಳ ಕಾಲ ಪ್ರಹಸನದ ತರಬೇತಿ ಪಡೆದಿತ್ತು.

ಖ್ಯಾತ ನಾಟಕ ರಚನೆಕಾರ, ನಿರ್ದೇಶಕ ನವೀನ್ ಶೆಟ್ಟಿ ಅಳಕೆ ಅವರ ಮಾರ್ಗದರ್ಶನದಲ್ಲಿ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ಕಾರ್ತಿಕ್, ವಿನೋದ್ ಶೆಟ್ಟಿ ಕೃಷ್ಣಾಪುರ ಮೊದಲಾದವರ ನಿರ್ದೇಶನದಲ್ಲಿ ತಂಡವು ಪ್ರಹಸನ ನೀಡಿತ್ತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದ್ಯಮಿ ಗಿರೀಶ್ ಶೆಟ್ಟಿ ಕಟೀಲ್, ಕಾರ್ಯಕ್ರಮ ಸಂಚಾಲಕಿ ಡಾ. ಆಶಾ ಜ್ಯೋತಿ ರೈ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಮೊದಲಾದವರು ಪ್ರಶಸ್ತಿ ವಿತರಿಸಿದರು.

ಸ್ಪರ್ಧೆಯಲ್ಲಿ ಮೊದಲ ಬಹುಮಾನ ಜಪ್ಪು ಬಂಟರ ಸಂಘ, ತೃತೀಯ ಬಹುಮಾನವನ್ನು ಗುರುಪುರ ಬಂಟರ ಸಂಘ ಪಡೆಯಿತು. ತೀರ್ಪುಗಾರರಾಗಿ ಶೀನಾ ನಾಡೋಳಿ, ಶೋಭ ರಾಜ್ ಪಾವೂರು, ಜ್ಯೋತಿಷ್ ಶೆಟ್ಟಿ ಸಹಕರಿಸಿದ್ದರು.

Comments are closed.