ಮಂಗಳೂರು, ಜುಲೈ. 30: ಮಾಜಿ ಮುಖ್ಯ ಮಂತ್ರಿಯೋರ್ವರ ಅಳಿಯ ಮಂಗಳೂರಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆಯಿಂದ ಸೋಮವಾರ ತಡ ರಾತ್ರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನದಿಗೆ ಹಾರಿ ಆತ್ಮಹತ್ಯೆಗೈದಿರುವ ವ್ಯಕ್ತಿಯನ್ನು ರಾಜ್ಯದ ಖ್ಯಾತ ಉದ್ಯಮಿ, ಮಾಜಿ ಮುಖ್ಯ ಮಂತ್ರಿ, ಹಿರಿಯ ರಾಜಕರಣಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಎಂದು ಹೇಳಲಾಗಿದೆ.
ನಗರದ ಹೊರವಲಯದ ತೊಕ್ಕೊಟ್ಟು – ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ತಡ ರಾತ್ರಿಯ ಬಳಿಕ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ವದಂತಿಗಳಿಗೆ ಕಾರಣವಾಗಿದೆ.
ಬಳಿಕ ಸೇತುವೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಸೋಮವಾರ ತಡರಾತ್ರಿ ಇನೋವ ಕಾರಿನಲ್ಲಿ ತಮ್ಮ ಚಾಲಕನೊಂದಿಗೆ ಬಂದಿದ್ದ ಸಿದ್ಧಾರ್ಥ ಅವರು ಸೇತುವೆ ಸಮೀಪ ಕಾರು ನಿಲ್ಲಿಸಿ ವಾಕಿಂಗ್ ಮಾಡುತ್ತೇನೆ ಎಂದು ಇಳಿದು ಹೋಗಿ ನದಿಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಿರಿಯ ಪೊಲೀಸರು ಈಗ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.





Comments are closed.