ಕರಾವಳಿ

ಸುರತ್ಕಲ್ ಬಂಟರ ಸಂಘದಲ್ಲಿ ಆಟಿದ ಪೊರ್ಲು – ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು / ಸುರತ್ಕಲ್ : ಬಂಟರ ಸಂಘ ಸುರತ್ಕಲ್ ಮತ್ತು ಮಹಿಳಾ ವೇದಿಕೆ ಸುರತ್ಕಲ್ ಇದರ ಸಹಯೋಗದಲ್ಲಿ ಆದಿತ್ಯವಾರ ದಂದು ಸುರತ್ಕಲ್ ಬ೦ಟರ ಭವನದಲ್ಲಿ 12ನೇ ವರ್ಷದ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ಜರುಗಿತು. ಕಾರ್ಯ ಕ್ರಮದ ಉದ್ಘಾಟನೆಯನ್ನು ಸೇಮಿಗೆಯ ಮಣೆಯಲ್ಲಿ ಸೇಮಿಗೆಯನ್ನು ಒತ್ತುವ ಮೂಲಕ ಸುರತ್ಕಲ್ ಮಾತಾ ಡೆವಲಪರ್ಸ್ ಮಾಲಕ ಸಂತೋಷ್ ಕುಮಾರ್ ಶೆಟ್ಟಿ ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ಆಟಿ ಎಂದರೆ ಬಹಳ ಕಷ್ಟಕರವಾದ ದಿನಗಳು. ಅಂದಿನ ದಿನಗಳಲ್ಲಿ ಹಿರಿಯರು ತಿಂಡಿ ತಿನಸುಗಳ ಬದಲಾಗಿ ಪ್ರಾಕೃತಿಕವಾಗಿ ದೊರೆಯುತ್ತಿದ್ದ ಸೊಪ್ಪು, ಕಾಯಿಗಳನ್ನು ಬಳಸುತ್ತಿದ್ದರು. ಆ ರೀತಿಯ ಬದುಕನ್ನು ನೆನಪಿಸುವ ಸಲುವಾಗಿ ನಾವಿಂದು ಬಗೆ ಬಗೆಯ ತಿನಸುಗಳ ಮೂಲಕ ಅಂದಿನ ಕಾಲದ ಸಂಪ್ರದಾಯವನ್ನು ಇಂದಿನ ಯುಗಕ್ಕೆ ತೋರಿಸಿ ಕೊಡುತ್ತಿದ್ದೇವೆ ಎಂದು ನುಡಿದರು.

ಬಂಟರ ಸಂಘ ವರ್ಕಾಡಿ ವಲಯ ಮಂಜೇಶ್ವರ, ಕಾಸರಗೋಡು ಮಹಿಳಾ ವಿಭಾಗ ಅಧ್ಯಕ್ಷೆ ಆಶಾ ದಿಲೀಪ್ ರೈ, ಸುಳ್ಯಮೆ ದಿಕ್ಸೂಚಿ ಭಾಷಣ ಮಾಡುತ್ತಾ ತುಳುನಾಡ ಜಾನಪದ ಸಂಪ್ರದಾಯಗಳು, ಭೂತಾರಾಧನೆ ತುಳುನಾಡಿನ ಹಿಂದಿನ ಕಾಲದ ಆಚಾರ ವಿಚಾರದ ಕುರಿತು ಮಾತುಗಳನ್ನಾಡಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಸುಧಾಕರ್ ಎಸ್.ಪೂಂಜ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೋಹನದಾಸ ಶೆಟ್ಟಿ ಕುಳಾಯಿ, ಪ್ರಸಾದನ ಕಲಾವಿದ ಗಿರಿಯಪ್ಪ ಇಡ್ಯಾ, ನಾಟಿ ವೈದ್ಯ ರಾಜನ್ ಪಿಳ್ಳೆ ಕೃಷ್ಣಾಪುರ, ರಂಗಭೂಮಿಯ ಉಮೇಶ್ ಕುಲಾಲ್ ತಡಂಬೈಲು, ಸ್ವ ಉದ್ಯೋಗ ಕ್ಷೇತ್ರದಲ್ಲಿ ರಿಕ್ಷಾ ಚಾಲಕಿ ಸುರತ್ಕಲ್ ವಿಜಯ ಲಕ್ಷ್ಮಿ ಅವರುಗಳನ್ನು ಅಭಿನಂದಿಸಲಾಯಿತು.

ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ರಾವ್, ದಾನಿ ಕಾವೇರಿ ಕೊರಗ ಶೆಟ್ಟಿ ಅವರಿಗೆ ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾ ಯಿತು. ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಆರ ಶೆಟ್ಟಿ ಸಂತಾಪ ನಿರ್ಣಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಎಕ್ಕಾರು ಬಂಟರ ಸಂಘ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು, ಬಂಟರ ಯಾನೆ ನಾವಡರ ಮಾತೃ ಸಂಘ ಮಂಗಳೂರು ಕಾರ್ಯಕಾರಿ ಸಮಿತಿ ಸದಸ್ಯೆ ಸಬಿತಾ ಆರ್ ಶೆಟ್ಟಿ, ಸುರತ್ಕಲ್ ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಅಧ್ಯಕ್ಷೆ ಬೇಬಿ ಎನ್ ಶೆಟ್ಟಿ, ಕಾಯ ದರ್ಶಿ ಚಿತ್ರಾ.ಜೆ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಸ್ವಾಗತಿಸಿದರು. ಚಿತ್ರಾ ಜೆ ಶೆಟ್ಟಿ ವಂದಿಸಿದರು. ರಾಜೇಶ್ವರಿ ಡಿ ಶೆಟ್ಟಿ, ಸುಧಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments are closed.