ಮಂಗಳೂರು : ಅಮೃತ ವಿದ್ಯಾಲಯಂ ಶಾಲೆಯಲ್ಲಿ ಇತ್ತೀಚಿಗೆ ಗುರುಪೂರ್ಣಿಮಾ ಕಾರ್ಯವನ್ನು ಭಕ್ತಿ ಶೃದ್ಧೆ ಹಾಗೂ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಶಿಣ ಕನ್ನಡ ಜಿಲ್ಲಾ ಐ.ಆರ್.ಸಿ.ಎಸ್ ನ ಕಾರ್ಯದರ್ಶಿಯಾದ ಶ್ರೀಯುತ ಎಸ್.ಎ ಪ್ರಭಾಕರ ಶರ್ಮ, ಶಾಲಾ ಸಂಚಾಲಕಿಯಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅವರು, ಶಾಲಾ ಪ್ರಾಂಶುಪಾಲರಾದ ಶ್ರೀಯುತ ರಾಮಚಂದ್ರ ಭಟ್ ಹಾಗೂ ಉಪಪ್ರಾಂಶುಪಾಲೆಯಾದ ಶ್ರೀಮತಿ ಅನುಪಮಾ ರಾವ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಶಾಲಾ ಸಂಚಾಲಕಿಯವರು ನಮ್ಮ ಸಂಸ್ಕೃತಿಯನ್ನು ಬೆಳೆಸಿ, ಹೆತ್ತವರ, ಹಿರಿಯರ ನಿಸ್ವಾರ್ಥ ಸೇವೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿ, ಮಾನಸ ಪೂಜೆ ಮತ್ತು ಸಂಸ್ಕೃತಿ ಪೂಜೆಯನ್ನು ನೆರವೇರಿಸಿ ಕೊಟ್ಟರು. ಉಪಪ್ರಾಂಶುಪಾಲರು ಗುರು ಸ್ತೋತ್ರ ಮತ್ತು ಗುರು ಪಾದುಕಾ ಸ್ತೋತ್ರದೊಂದಿಗೆ ಸದ್ಗುರು ಮಾತಾ ಅಮೃತಾನಂದಮಯಿ ದೇವಿಯವರ ಪಾದುಕಾ ಪೂಜೆಯನ್ನು ಗೈದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಕ್ಶಿಣ ಕನ್ನಡ ಜಿಲ್ಲಾ ಐ.ಆರ್.ಸಿ.ಎಸ್ ನ ಕಾರ್ಯದರ್ಶಿಯಾದ ಎಸ್.ಎ ಪ್ರಭಾಕರ ಶರ್ಮ ಅವರು ಮಾತನಾಡಿ, ನಮ್ಮ ಹಿಂದೂ ಸಂಸ್ಕೃತಿ, ಸಂಪ್ರದಾಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಅಮೃತಾ ವಿದ್ಯಾಲಯಂ ಸಂಸ್ಥೆ ಬುನಾದಿಯಾಗಿದೆ. ಇಲ್ಲಿ ಶಿಕ್ಷಣವನ್ನು ಪಡೆಯುವವರೇ ಧನ್ಯರು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅವರನ್ನು ಗೌರವಿಸುವುದೇ ನಮ್ಮ ಸಂಸ್ಕ್ರತಿಯೆಂದು ಕಾರ್ಯಕ್ರನಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳು ತಮ್ಮ ಹೆತ್ತವರ ಹಾಗೂ ಗುರುಗಳ ಪಾದಪೂಜೆಯನ್ನು ಶ್ರದ್ಧಾ, ಭಕ್ತಿಯಿಂದ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರ ಅನಸೂರೆಗೊಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶ್ರುತಿ ಅವರು ನಡೆಸಿಕೊಟ್ಟರು. ಪ್ರಾಂಶುಪಾಲರು ಸ್ವಾಗತಿಸಿ, ಉಪಪ್ರಾಂಶುಪಾಲರು ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
Comments are closed.