ಕರಾವಳಿ

ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡದವರ ಜೊತೆ ಶಾಸಕ ಕಾಮಾತ್ ಚರ್ಚೆ – ಮನವೊಲಿಕೆ

Pinterest LinkedIn Tumblr

ಮಂಗಳೂರು : ಮಂಗಳೂರಿನ ಮಣ್ಣಗುಡ್ಡೆಯಿಂದ ಕುದ್ರೋಳಿ, ಅಳಕೆಯಾಗಿ ನ್ಯೂಚಿತ್ರಾ ಟಾಕೀಸಿನವರೆಗಿನ ರಸ್ತೆ ಅಗಲ ಮಾಡುವ ಪ್ರಕ್ರಿಯೆ ನಡೆದು ಕಾಂಕ್ರೀಟಿಕರಣ ಮಾಡಲಾಗಿದೆ. ಆದರೆ ಕೆಲವು ಕಡೆ ಸಾರ್ವಜನಿಕರು ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡದೇ ಇದ್ದ ಕಾರಣ ಯೋಜನೆಯಂತೆ ಸಂಪೂರ್ಣ ರಸ್ತೆ ಅಗಲೀಕರಣ ಮಾಡಲು ಸಾಧ್ಯವಾಗಿಲ್ಲ. ಆ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಆಗದೇ ಕೆಲಸ ಕಾಮಗಾರಿಗೆ ತೊಡಕು ಉಂಟಾಗಿರುವ ಕಡೆಗಳಲ್ಲಿ ಸ್ವತ: ಶಾಸಕ ಡಿ ವೇದವ್ಯಾಸ ಕಾಮತ್ ಅವರು ತೆರಳಿ ಪರಿಶೀಲಿಸಿದರು.

ಆ ಬಳಿಕ ಜಾಗದ ಮಾಲೀಕರ ಬಳಿ ಸಮಾಲೋಚನೆ ನಡೆಸಿದರು. ಅದರ ನಂತರ ಅಧಿಕಾರಿಗಳೊಂದಿಗೆ ಮುಂದೆ ಆಗಬೇಕಾದ ಸಾರ್ವಜನಿಕರ ಅನುಕೂಲತೆಗೆ ತಕ್ಕಂತೆ ನಡೆಯಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದರು. ಶಾಸಕರ ಜನಪರ ನಿಲುವುಗಳಿಂದ ರಸ್ತೆ ಅಗಲೀಕರಣ ಸುಲಲಿತವಾಗಿ ನಡೆಯಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಶಾಸಕ ಕಾಮತ್ ಅವರೊಂದಿಗೆ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಪಾಲಿಕೆ ತಾಂತ್ರಿಕ ಸಲಹೆಗಾರ ಧರ್ಮರಾಜ್, ಅಧಿಕಾರಿ ಗಳಾದ ನಗರ ಯೋಜನಾ ಅಧಿಕಾರಿ ಬಾಲಕೃಷ್ಣ ಗೌಡ,ಎಕ್ಸಿಕ್ಯೂಟಿವ್ ಇಂಜಿನಿಯರ್ ಮರಳಹಳ್ಳಿ, ಜ್ಯೂನಿಯರ್ ಇಂಜಿನಿಯರ್ ಗಣಪತಿ, ಸಹಾಯಕ ನಗರ ಯೋಜನಾ ಅಧಿಕಾರಿ ಅಶೋಕ್,ರಘುಪಾಲ್ ಮತ್ತು ಬಿಜೆಪಿ ಮುಖಂಡರಾದ ಮೋಹನ್ ಆಚಾರ್
,ವಸಂತ ಜೆ ಪೂಜಾರಿ,ಜಯಂತಿ ಆಚಾರ್,ಮಹೇಶ್ ಕುಂದರ್,ವೆಂಕಟೇಶ್ ಆಚಾರ್,ಗೋಕುಲ್ ದಾಸ್ ಭಟ್, ಪ್ರಶಾಂತ್ ಭಟ್, ಅನಂತ್ ಕೃಷ್ಣ ಕಾಮತ್,ರಘುನಾಥ್ ಪ್ರಭು,ಸತೀಶ್ ಬಾಯಾರ್,ಹರೀಶ್ ಬೋಳೂರು ಸಹಿತ ಅನೇಕರು ಉಪಸ್ಥಿತರಿದ್ದರು.

Comments are closed.