ಕರಾವಳಿ

ಕೋಡಿಯ ಡಾ| ರಾಜ್ ಕುಮಾರ್ ಪಾರ್ಕಿನಲ್ಲಿ ವನಮಹೋತ್ಸವ

Pinterest LinkedIn Tumblr

ಕುಂದಾಪುರ: ಕನ್ನಡಾಭಿಮಾನಿ ಡಾ| ರಾಜ್ ಕುಮಾರ್ ಸಂಘಟನೆ ಕುಂದಾಪುರ ಇದರ ಉಸ್ತುವಾರಿಯಲ್ಲಿ ಕುಂದಾಪುರ ಕೋಡಿ ಕಡಲತೀರದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಾಣಗೊಂಡಿರುವ ಡಾ| ರಾಜ್ ಕುಮಾರ್ ಪಾರ್ಕಿನಲ್ಲಿ ಕೋಡಿ ಗ್ರಾಮಸ್ಥರ ಸಹಕಾರದಲ್ಲಿ ಸಂಭ್ರಮದ ವನಮಹೋತ್ಸವ ಕಾರ್ಯಕ್ರಮ ಜರಗಿತು.

ಉದ್ಯಮಿ ಕೋಡಿ ಶಂಕರ ಪೂಜಾರಿ ದಂಪತಿ ಹಾಗೂ ಕುಂದಾಪುರ ಪುರಸಭಾ ಸದಸ್ಯೆ ಲಕ್ಷ್ಮಿ ಬಾಯಿ ಅವರು ವಿವಿಧ ವರ್ಗದ ಆಕರ್ಷಕ ಹೂವಿನ ಗಿಡಗಳು ಹಾಗೂ ಅಲಂಕಾರಿಕ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ|ರಾಜ್ ಕುಮಾರ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿಯವರು ಸಂಘದ ಬಹುಕಾಲದ ಕನಸಾದ ಸುಸಜ್ಜಿತ ಪಾರ್ಕ್ ದಾನಿಗಳ ನೆರವಿನಿಂದ ಇದೀಗ ನನಸಾಗುವತ್ತ ಸಾಗಿದೆ ಇಲ್ಲಿಗಾಗಮಿಸುವ ಅಸಂಖ್ಯಾತ ಪ್ರವಾಸಿಗರ ಸೌಲಭ್ಯಕ್ಕಾಗಿ ಪಾರ್ಕನ್ನು ಅನಾವರಣಗೊಳಿಸಲಾಗಿದ್ದು ಇದೀಗ ವನಮಹೋತ್ಸವ ಕಾರ್ಯಕ್ರಮದಿಂದಾಗಿ ಆಕರ್ಷಕ ಹೂವು ಹಾಗು ಹಸಿರು ಗಿಡ ಬಳ್ಳಿಗಳಿಂದ ಪಾರ್ಕಿನ ಶೋಭೆ ಇನ್ನಷ್ಟು ಹೆಚ್ಚಲಿದೆ, ಈ ನಿಟ್ಟಿ ನಲ್ಲಿ ಎಲ್ಲರ ಸಹಕಾರವನ್ನು ಕೋರುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಶಾಂತ್ ಪೂಜಾರಿ, ಮಂಜುನಾಥ ಖಾರ್ವಿ, ರಾಘು ಪೂಜಾರಿ, ಸುನೀಲ್ ಖಾರ್ವಿ ತಲ್ಲೂರು, ರಾಯ್ಸನ್ ಡಿಸೋಜ, ಗಣೇಶ ಪೂಜಾರಿ, ಅಗಸ್ಟೀನ್, ರಾಜ ಕೋಡಿ, ಚಂದ್ರ ಎಸ್. ಪೂಜಾರಿ, ಸಂತೋಷ್ ಪೂಜಾರಿ ಮುಂತಾದವರು ಭಾಗವಹಿಸಿದ್ದರು

Comments are closed.