
ಮಂಗಳೂರು, ಜೂನ್.21: ಕರ್ತವ್ಯ ನಿರತ ಟ್ರಾಫಿಕ್ ಕಾನ್ ಸ್ಟೆಬಲ್ ಮೇಲೆ ಬೈಕ್ ಸವಾರನೋರ್ವ ಹಲ್ಲೆ ನಡೆಸಿದ್ದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ತೊಕ್ಕೊಟ್ಟು ಬಳಿ ಇಂದು ನಡೆದಿದ್ದು, ಪ್ರಕ ರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದವ ವ್ಯಕ್ತಿಯ ಫೋಟೊವನ್ನು ಕರ್ತವ್ಯ ನಿರತ ಟ್ರಾಫಿಕ್ ಕಾನ್ ಸ್ಟೆಬಲ್ ತೆಗೆದ ಕಾರಣಕ್ಕೆ ಬೈಕ್ ಸವಾರ ಟ್ರಾಫಿಕ್ ಕಾನ್ ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಲ್ಲದೇ ಇದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆ ಬೈಕ್ ಸವಾರ ಹಲ್ಲೆ ಮಾಡಿ ಪರಾರಿಯಾಗಿದ್ದ.

ಟ್ರಾಫಿಕ್ ಕಾನ್ ಸ್ಟೆಬಲ್ ಸಂಗಣ್ಣ ಗೌಡ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಆರೋಪಿಯನ್ನು ಮದನಿ ನಗರ ನಿವಾಸಿ ಅಝರ್ ಎಂದು ಗುರುತಿಸಲಾಗಿದೆ.
ತೊಕ್ಕೊಟ್ಟು ಫ್ಲೈ ಓವರ್ ಸಮೀಪ ಕರ್ತವ್ಯದಲ್ಲಿದ್ದ ಟ್ರಾಫಿಕ್ ಕಾನ್ ಸ್ಟೆಬಲ್ ಸಂಗಣ್ಣ ಗೌಡ ಎಂಬುವರು ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದ ಬೈಕಿನ ಫೋಟೊ ತೆಗೆದ ಹಿನ್ನೆಲೆಯಲ್ಲಿ ಬೈಕ್ ಸವಾರ, ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇಂದು ಬೆಳಗ್ಗೆ ತೊಕ್ಕೊಟ್ಟಿನ ಫ್ಲೈಓವರ್ ಸಮೀಪ ಆರೋಪಿ ಹೆಲ್ಮೆಟ್ ಧರಿಸದೆ ಬೈಕಿನಲ್ಲಿ ಸಂಚರಿಸುತ್ತಿದ್ದನೆನ್ನಲಾಗಿದೆ. ಇದನ್ನು ಗಮನಿಸಿದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿ ಸಂಗಣ್ಣ ಗೌಡ ಬೈಕಿನ ಫೋಟೊ ತೆಗೆದಿದ್ದಾರೆ. ಈ ವೇಳೆ ಸಂಗಣ್ಣರ ಮೇಲೆ ಆರೋಪಿ ಅಝರ್ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದನೆನ್ನಲಾಗಿದೆ.
ಹಲ್ಲೆ ಕುರಿತು ಸಂಗಣ್ಣ ಗೌಡ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂಗಣ್ಣ ನೀಡಿರುವ ದೂರನ್ನು ಆಧರಿಸಿ ಆರೋಪಿ ಅಝರ್‌ನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅರೋಪಿ ಪತ್ತೆಗೆ ಸಹಕರಿಸಿದ ಹೋಂ ಗಾರ್ಡ್‌ಗೆ ಕಮಿಷನರ್‌ರಿಂದ ಪ್ರಶಂಸೆ:

ಆರೋಪಿಯನ್ನು ಹಿಡಿಯುವಲ್ಲಿ ಸಹಕರಿಸಿದ ಹಮೀದ್ ಪಾವಳ, ಹೋಂ ಗಾರ್ಡ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರಶಂಸಿಸಿದ್ದಾರೆ.
Comments are closed.