ಕರಾವಳಿ

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಗಮನ ಸೆಳೆದ ಮಹಿಳಾ ಯಕ್ಷಗಾನ ನಾಟ್ಯ ವೈಭವ

Pinterest LinkedIn Tumblr

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಭಾನುವಾರ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮ-2019 ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಶಿಬಿರ ಹಾಗೂ ತೆಂಕು ಹಾಗೂ ಬಡಗುತಿಟ್ಟಿನ ಪ್ರಸಿದ್ಧ 7 ಭಾಗವತರಿಂದ ಯಕ್ಷ ಸಪ್ತಸ್ವರ, ನೃತ್ಯ ವರ್ಷ ದರ್ಶನ ಬಳಿಕ ಮಹಿಳಾ ಯಕ್ಷಗಾನ ನಾಟ್ಯ ವೈಭವ ಜರಗಿತು.

ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಟ್ರಸ್ಟಿನ ಸದಸ್ಯರು ಹಾಗೂ ಯಕ್ಷಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ ಸಹಯೋಗದಲ್ಲಿ ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ಶಿಬಿರ ಹಾಗೂ ಉಚಿತ ಔಷಧಿ ವಿತರಣೆ ಕಾರ್ಯಕ್ರಮವೂ ನಡೆಯಿತು.

ಯಕ್ಷಗಾನ ಸಂಭ್ರಮ : ಗಮನ ಸೆಳೆದ ಮಹಿಳಾ ಯಕ್ಷಗಾನ ನಾಟ್ಯ ವೈಭವ

ಬೆಳಗ್ಗೆ ತೆಂಕು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ೭ ಭಾಗವತರಿಂದ ಯಕ್ಷ ಸಪ್ತಸ್ವರ, ನೃತ್ಯ ವರ್ಷ ದರ್ಶನ, ಬಳಿಕ ಮಹಿಳಾ ಯಕ್ಷಗಾನ ನಾಟ್ಯ ವೈಭವ ಜರಗಿತು. ಮಧ್ಯಾಹ್ನ 3 ಗಂಟೆಯಿಂದ ಯಕ್ಷಗಾನ ತಾಳಮದ್ದಳೆ, ಸಂಜೆ ಗಂಟೆ 4.30 ರಿಂದ 5 ರವರೆಗೆ ಯಕ್ಷಗಾನ ನೃತ್ಯ ಕಾರ್ಯಕ್ರಮ ನಡೆಯಿತು. ಸಂಜೆ 5ರಿಂದ ವಿವಿಧ ಗಣ್ಯರ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ಜರಗಿತು.

ಸಂಜೆ 7 ಗಂಟೆಯಿಂದ ದೇರಾಜೆ ಸೀತಾರಾಮಯ್ಯ ಅವರ `ಕುರುಕ್ಷೇತ್ರಕ್ಕೊಂದು ಆಯೋಗ’ ಎಂಬ ವಿಶಿಷ್ಟ ಯಕ್ಷಗಾನ ಪ್ರಯೋಗವು ಕದ್ರಿ ನವನೀತ ಶೆಟ್ಟಿಯವರ ರಂಗ ಪರಿಕಲ್ಪನೆ ಹಾಗೂ ನಿರೂಪಣೆಯೊಂದಿಗೆ ಪ್ರಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಜರಗಿತು.

ಬಾನುವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೆ ನಡೆದ ಎಲ್ಲಾ ಕಾರ್ಯಕ್ರಮಗಳು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಹಾಗೂ ಕಾರ್ಯಕ್ರಮದ ರೂವಾರಿ ಪಟ್ಲ ಸತೀಶ್ ಶೆಟ್ಟಿ ಅವರ ನೇತ್ರತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನೆರವೇರಿತು.

Comments are closed.