ಕರ್ನಾಟಕ

ದಿಢೀರ್ ಕುಮಾರಸ್ವಾಮಿ ಮತ್ತು ನಿಖಿಲ್ ಭೇಟಿಯಾದ ಹೆಚ್, ವಿಶ್ವನಾಥ್

Pinterest LinkedIn Tumblr


ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರು, ದಿಢೀರ್ ಇಂದು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕೆಲವೊಂದು ವಿಷಯಗಳ ಕುರಿತು ಚರ್ಚೆ ನಡೆಸಿದರು.

ಒಬ್ಬ ರಾಜ್ಯಾಧ್ಯಕ್ಷನ ಮಾತಿಗೆ ಬೆಲೆ ಇಲ್ಲ

ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಕೇಟ್ ಹಂಚಿಕೆಯಲ್ಲಿ ಸಾರಾ ಮಹೇಶ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡ ಬಗ್ಗೆ ಅಸಮಾಧಾನ ಹೊರಹಾಕಿದ್ದು, ನಾನು ಕೇಳಿದ ಅಭ್ಯರ್ಥಿಗಳಿಗೆ ಟಿಕೇಟ್ ಕೊಟ್ಟಿದ್ದಾರೆ ಮೈಸೂರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಆದರೆ ನಾನು ಸೂಚಿಸಿದ ಯಾವ ಅಭ್ಯರ್ಥಿಗಳಿಗೂ ಟಿಕೇಟ್ ಕೊಟ್ಟಿಲ್ಲ, ಒಬ್ಬ ರಾಜ್ಯಾಧ್ಯಕ್ಷನ ಮಾತಿಗೆ ಬೆಲೆ ಇಲ್ಲ ಅಂದರೆ ಏನು ಮಾಡಬೇಕು ಎಂದು ಭೇಟಿ ವೇಳೆ ಪ್ರಶ್ನೆ ಮಾಡಿದ್ದು, ಪಕ್ಷದ ಕೆಲ ತೀರ್ಮಾನ ಗಳ ಬಗ್ಗೆ ಕೂಡ ಚರ್ಚೆ ನಡೆಸಿದ್ದಾರೆ.

ಪಕ್ಷದಲ್ಲಿ ನನ್ನ ಮಾತಿಗೆ ಬೆಲೆ ಇಲ್ಲ – ಹೆಚ್. ವಿಶ್ವನಾಥ್

ಕವಡೆ ಕಾಸಿನ ಕಿಮ್ಮತ್ತಿಲ್ಲದೆ ರಾಜ್ಯಾಧ್ಯಕ್ಷ ಆಗಿರುವುದು ಕಷ್ಟ, ಪಕ್ಷದಲ್ಲಿ ನನ್ನ ಮಾತಿಗೆ ಬೆಲೆ ಇಲ್ಲ ಎಂದರೆ ಕಾರ್ಯಕರ್ತರಿಗೆ ಏನು ಉತ್ತರ ನೀಡಬೇಕು. ಒಂದು ಟಿಕಟ್ ಕೊಡಿಸುವ ಶಕ್ತಿಯೂ ಇಲ್ಲ ಎಂದು ವಿಶ್ವಮಾಥ್ ಮುಖ್ಯಮಂತ್ರಿ ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಇನ್ನೂ ಪಕ್ಷದ ಒಳಗಿನ ಬೆಳವಣಿಗಳಿಂದ ಮನನೊಂದಿರೋ ವಿಶ್ವನಾಥ್ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕೆಲವೊಂದು ವಿಷಯಗಳ ಕುರಿತು ಚರ್ಚೆ ಮಾಡಿದ್ದಾರೆ.

Comments are closed.