ಕರಾವಳಿ

“ಗುಡ್ ಫ್ರೆಡೆ” ರಜೆ ರದ್ದುಪಡಿಸದಂತೆ ಮಂಗಳೂರು ಧರ್ಮಪ್ರಾಂತ್ಯದಿಂದ ಮುಖ್ಯಮಂತ್ರಿಗೆ ಮನವಿ

Pinterest LinkedIn Tumblr

ಮಂಗಳೂರು : ಶುಭ ಶುಕ್ರವಾರದ (“ಗುಡ್ ಫ್ರೆಡೆ) ರಜೆಯನ್ನುರದ್ದು ಮಾಡಲು ಸರಕಾರವು ನಡೆಸುತ್ತಿರುವ‌ ಆಲೋಚನೆಯ ವಿರುದ್ದ ಮಂಗಳೂರು ಧರ್ಮಪ್ರಾಂತ್ಯದ ನಿಯೋಗವು ಜಿಲ್ಲಾಧಿಕಾರಿಯ ಮೂಲಕ ಮಾನ್ಯ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ವಂದನೀಯ ಮ್ಯಾಕ್ಸಿಂ ನೊರೊನ್ಹಾರವರ ಮುಂದಾಳತ್ವದಲಿ ನಿಯೋಗವುಜಿಲ್ಲಾಧಿಕಾರಿ ಶ್ರೀ ಸಸಿಕಾಂತ್ ಸೆಂಥಿಲ್‌ರವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.

ಜಿಲ್ಲಾಧಿಕಾರಿಯವರು, ಕ್ರೈಸ್ತ ಸಮುದಾಯದ ಈ ಬೇಡಿಕೆಯನ್ನು, ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

ನಿಯೋಗದಲ್ಲಿ, ವಂದನೀಯ ವಿಕ್ಟರ್ ವಿಜೆಯ್ ಲೋಬೊ, ಸಾರ್ವಜನಿಕ ಸಂಪರ್ಕಾಧಿಕಾರಿ ಮಂಗಳೂರು ಧರ್ಮಪ್ರಾಂತ್ಯ, ವಂದನೀಯ‌ ಆಂಟನಿ ಶೆರಾ, ಕಾರ್ಯದರ್ಶಿ ಕಥೋಲಿಕ ವಿಧ್ಯಾ ಮಂಡಳಿ, ವಂದನೀಯಜೆ, ಬಿಕ್ರಾಸ್ತಾ , ಕಾರ್ಯದರ್ಶಿ ಶ್ರೀಸಾಮಾನ್ಯರ ಆಯೋಗ, ವಂದನೀಯ ರಿರ್ಚಾಡ್‌ ಡಿಸೋಜ, ನಿರ್ದೇಶಕರು ಕೆನಾರಾ ಸಂಪರ್ಕ ಕೇಂದ್ರ, ಶ್ರೀ ಸುಶೀಲ್ ನೊರೊನ್ಹಾ, ಸದಸ್ಯರು, ಕಥೋಲಿಕ್‌ ಕೌನ್ಸಿಲ್‌ ಆಫ್‌ ಇಂಡಿಯಾ, ಶ್ರೀ ರಾಯ್‌ಕ್ಯಾಸ್ತಲಿನೊ, ಮಾಜಿ‌ ಅಧ್ಯಕ್ಷರು ಕರ್ನಾಟ ಕಕೊಂಕಣಿ ಸಾಹಿತ್ಯ‌ ಆಕಾಡೆಮಿ ಇವರುಗಳು ಉಪಸ್ಥಿತರಿದ್ದರು.

Comments are closed.