ಕರ್ನಾಟಕ

ಪತ್ನಿಯ ಜೊತೆ ಸೆಕ್ಸ್ ಮಾಡುವುದನ್ನು ನೋಡುವ ಆಸೆಯಿಂದ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟ ಪತಿ

Pinterest LinkedIn Tumblr

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಜೊತೆ ಸೆಕ್ಸ್ ಮಾಡುವುದನ್ನು ನೋಡುವ ಆಸೆಯಿಂದ ಅದಕ್ಕಾಗಿ ಮನೆಯ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟಿದ್ದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಆರೋಪಿ ಪತಿ ರಿತ್ವಿಕ್ ಹೆಗಡೆ ಕಾಟ ಸಹಿಸಿಕೊಳ್ಳಲಾಗದೇ ಸಂತ್ರಸ್ತೆ ಪತಿ, ಅತ್ತೆ-ಮಾವನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸಂತ್ರಸ್ತೆ ಡಾಕ್ಟರ್ ಆಗಿದ್ದು, ಮಹಾರಾಷ್ಟ್ರ ನಿವಾಸಿ ಆರೋಪಿ ಪತಿ ರಿತ್ವಿಕ್ ಹೆಗಡೆ ಜೊತೆ ಮಹಿಳೆ ಮದುವೆಯಾಗಿದ್ದರು. ಈತ ಬ್ಯುಸಿನೆಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಈ ದಂಪತಿಗೆ ನಾಲ್ಕುವರೆ ವರ್ಷದ ಮಗನಿದ್ದಾನೆ.

ಆರೋಪಿ ಪತಿ ರಿತ್ವಿಕ್ ತನ್ನ ಹೆಂಡತಿಯ ಜೊತೆ ಸೆಕ್ಸ್ ಮಾಡುವುದನ್ನು ನೋಡುವ ಆಸೆಯಿಂದ ಅದಕ್ಕಾಗಿ ಮನೆಯ ಬೆಡ್‍ರೂಂನಲ್ಲೇ ಸಿಸಿಟಿವಿ ಇಟ್ಟಿದ್ದನು. ಅಷ್ಟೇ ಅಲ್ಲದೇ ಪತ್ನಿ ಬಟ್ಟೆ ಬದಲಿಸಿದರೂ ಸಿಸಿಟಿವಿ ಚೆಕ್ ಮಾಡುತ್ತಿದ್ದನು. ಇಷ್ಟೇ ಅಲ್ಲದೆ ಹೆಂಡತಿಯ ಮೇಲೆ ಪದೇ ಪದೇ ಅನುಮಾನ ಪಡುತ್ತಿದ್ದನು. ಇದರಿಂದ ಪತ್ನಿಯ ಇ-ಮೇಲ್ ಅನ್ನು ಹ್ಯಾಕ್ ಮಾಡಿ ಅದರಲ್ಲಿ ಹೆಂಡತಿಯ ಸ್ನೇಹಿತರಿಗೆ ಆಶ್ಲೀಲವಾಗಿ ಮೇಸೆಜ್ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಪತಿಯ ನಡೆಯನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಜೊತೆಗೆ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದಾನೆ. ಇದರಿಂದ ನೊಂದ ಮಹಿಳೆ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಪತಿ ರಿತ್ವಿಕ್, ಅತ್ತೆ, ನಾದಿನಿ ಅನೇಕ ವರ್ಷಗಳಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ಧಗಳಿಂದ ಬೈಯುತ್ತಾ, ಹಲ್ಲೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾಗಿದ್ದರೂ ಕೂಡ ಪತಿ ಬೆಡ್ ರೂಮಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ನಾನು ಮಲಗುವ ಮತ್ತು ಬಟ್ಟೆ ಬದಲಿಸುವುದನ್ನು ಚಿತ್ರೀಕರಿಸಿ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾನೆ. ಜೊತೆಗೆ ನನ್ನ ಇ-ಮೇಲ್ ಅನ್ನು ಹ್ಯಾಕ್ ಮಾಡಿ ಅದರಿಂದ ಬೇರೆಯವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.