ಕರಾವಳಿ

ಶಾಸಕ ಕಾಮಾತ್‍‍ರಿಂದ ಸಾರ್ವಜನಿಕರ ಸಮಸ್ಯೆಗೆ ತ್ವರಿತ ಸ್ಫಂದನೆ

Pinterest LinkedIn Tumblr

ಮಂಗಳೂರು : ಮಂಗಳೂರಿನ ಉರ್ವಾದಲ್ಲಿರುವ ಹೊಯಿಗೆಬೈಲ್ ಸಮೀಪದ ದೈವಜ್ಞ ಕಲ್ಯಾಣ ಮಂಟಪದ ಬಳಿ ಚರಂಡಿಯಲ್ಲಿರುವ ನಿರುಪಯುಕ್ತ ಪೈಪ್ ನ್ನು ತೆಗೆಯಬೇಕು ಎನ್ನುವ ಆ ಪರಿಸರದ ಜನರ ಬೇಡಿಕೆಗೆ ತ್ವರಿತವಾಗಿ ಸ್ಫಂದಿಸಿದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪಾಲಿಕೆ ತಕ್ಷಣ ಚರಂಡಿಯಲ್ಲಿರುವ ನಿರುಪಯುಕ್ತ ಪೈಪ್ ನ್ನು ಅಲ್ಲಿಂಸ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರ ಹೊಯಿಗೆಬೈಲ್ ಪರಿಸರಕ್ಕೆ ಭೇಟಿ ಕೊಟ್ಟು ಜನರ ಬೇಡಿಕೆಗಳನ್ನು ಆಲಿಸಿ ಪಾಲಿಕೆ ಇಂಜಿನಿಯರ್ಸ್ ಗಳೊಂದಿಗೆ ಮಾತನಾಡಿದರು. ರಾಜಕಾಲುವೆಯಲ್ಲಿ ನಿರುಪಯುಕ್ತ ಪೈಪ್ ಇರುವುದರಿಂದ ಡ್ರೈನೇಜ್ ಬ್ಲಾಕ್ ಆಗುತ್ತಿದೆ. ಅದನ್ನು ತೆಗೆಯಲು ಪಾಲಿಕೆ ಒಪ್ಪಿದರೂ ಅಧಿಕಾರಿ ಗಳು ಅದನ್ನು ತೆಗೆಸಲು ಹಿಂಜರಿಯುವುದು ಸರಿಯಲ್ಲ ಎಂದು ಶಾಸಕ ಕಾಮತ್ ಹೇಳಿದರು.

ಶಾಸಕರೊಂದಿಗೆ ಸ್ಥಳೀಯ ಬಿಜೆಪಿ ಪ್ರಮುಖರಾದ ಕಿಶೋರ್, ಗಣೇಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Comments are closed.