ಕರಾವಳಿ

ತೊಕ್ಕೊಟ್ಟು ಮೇಲ್ಸೇತುವೆ ಜೂನ್ 10ಕ್ಕೆ ಸಂಚಾರ ಮುಕ್ತ : ಸಂಸದ ನಳಿನ್ ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು : ರಾ.ಹೆ 66 ರ ತೊಕ್ಕೊಟ್ಟು ಮೇಲ್ಸೆತುವೆಯು ಜೂ.10 ರಂದು ಸಂಚಾರಮುಕ್ತವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಕಳೆದ ಎಂಟು ವರುಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು ಬುಧವಾರದಂದು ಕಾಮಗಾರಿ ಪರಿಶೀಲಿಸಿದ ಸಂಸದ ನಳಿನ್ ಅವರು ಜೂನ್.10 ರಂದು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು.

ಕಾಮಗಾರಿಯು 98./. ಪೂರ್ತಿಗೊಂಡಿದ್ದು ಮುಂದಿನ ವಾರವೇ ಸಂಪೂರ್ಣಗೊಳ್ಳಲಿದೆ ಎಂದರು.ಕಾಮಗಾರಿಗೆ ಹಣಕಾಸಿನ ಅಡಚಣೆ ಉಂಟಾದ ಸಂಧರ್ಭದಲ್ಲಿ ಬ್ಯಾಂಕ್ ನಿಂದ 55 ಕೋಟಿ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಉಳ್ಳಾಲಕ್ಕೆ ತೆರಳುವ ವಾಹನಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಮೇಲ್ಸೇತುವೆ ಕಾಮಗಾರಿ ಸಂಪೂರ್ಣಗೊಂಡತೆಯೇ ಸರ್ವಿಸ್ ರಸ್ತೆಗಳ ಅಗಲೀಕರಣ ನಡೆಸಿ ಇತರ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದರು.

ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು.ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್,ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ,ತಾ.ಪಂ ಸದಸ್ಯ ರವಿಶಂಕರ್,ಮುಖಂಡರಾದ ಚಂದ್ರಹಾಸ್ ಪಂಡಿತ್ ಹೌಸ್,ಸಂಜೀವ ಶೆಟ್ಟಿ ಅಂಬ್ಲಮೊಗರು,ರಾಜೀವಿ ಕೆಂಪು ಮಣ್ಣು,ಭಾರತಿ ಗಟ್ಟಿ ಮೊದಲಾದವರು ಇದ್ದರು.

Comments are closed.