ಕರ್ನಾಟಕ

ಮಂಡ್ಯದಲ್ಲಿ ‘ನಿಖಿಲ್’ರನ್ನು ಮಣಿಸಿ ವಿಜಯದ ನಗೆಬೀರಲಿದ್ದಾರೆ ಸುಮಲತಾ?

Pinterest LinkedIn Tumblr

ಮಂಡ್ಯ: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಒಮ್ಮೆ ನಿಖಿಲ್ ಮತ್ತೊಮ್ಮೆ ಸುಮಲತಾ ಮುನ್ನಡೆ ಕಾಯ್ದು್ಕೊಳ್ಳುತ್ತಿದ್ದಾರೆ. ಸದ್ಯದ ವರದಿಯ ಪ್ರಕಾರ ಸುಮಲತಾ ಮುನ್ನಡೆ ಕಾಯ್ದುಕೊಂಡಿದ್ದಾರೆ.

1.25ರ ಸುಮಾರಿಗೆ 13ನೇ ಸುತ್ತಿನ ಮತ ಎಣಿಕೆ ನಡೆದಿದ್ದು 55 ಸಾವಿರ ಮತಗಳ ಮುನ್ನಡೆಯನ್ನು ಸುಮಲತಾ ಕಾಯ್ದುಕೊಂಡಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಸುಮಾರು 14 ಲಕ್ಷ ಮತಗಳಿದ್ದು ಬಹುತೇಕ ಅರ್ದದಷ್ಟು ಮತ ಎಣಿಕೆ ಕಾರ್ಯ ಮುಗಿದಿದ್ದು ಇನ್ನು ಮತ ಎಣಿಕೆ ಕಾರ್ಯ ಸಾಗುತ್ತಿದೆ.

ಇನ್ನು ಸುಮಲತಾ ಹೆಸರಿನ ಮೂವರು ಸುಮಲತಾರು ಕೂಡ ಒಂದಷ್ಟು ಓಟು ಪಡೆದಿರುವುದು ಸುಮಲತಾ ಮತ ಒಡೆಯಲು ಸ್ವಲ್ಪ ಮಟ್ಟಿಗೆ ಕಾರಣವಾಗಿದೆ. ಆದರೂ ಕೂಡ ಸುಮಲತಾ ಇದೇ ರೀತಿಯ ಮುನ್ನಡೆ ಕಾಯ್ದುಕೊಂಡರೆ ಗೆಲುವಿನ ನಗೆ ಬೀರುವುದು ಖಚಿತವೇ ಆಗಿದೆ.

14ನೇ ಸುತ್ತಿನಲ್ಲಿ (1.45 ಗಂಟೆಗೆ) ಸುಮಾರು 85 ಸಾವಿರ ಅಂತರದಲ್ಲಿ ಸುಮಲತಾ ಮುಂದಿದ್ದಾರೆ.

Comments are closed.