ಕರಾವಳಿ

ಭರ್ಜರಿ ಗೆಲವು ಸಾಧಿಸಿ 2ನೇ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ಬಿಜೆಪಿಯ ನಾಯಕಿ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತೆ ಲೋಕಸಭೆ ಪ್ರವೇಶಿಸುವ ಮೂಲಕ ಎರಡನೇ ಬಾರಿ ಸಂಸದೆಯಾಗಲಿದ್ದಾರೆ. ಈ ಬಾರಿ ಸಂಸದೆ ಶೋಭಾ ಮತ್ತು ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನಡುವೆ ಹಣಾಹಣಿ ಏರ್ಪಟ್ಟಿತ್ತು.

ರಾಜ್ಯದ ಪ್ರತಿಷ್ಠಿತ ಲೋಕ ಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಉಡುಪಿ ಚಿಕ್ಕಮಗಳೂರು ಲೋಕಸಭೆಯ 2014ರ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಆಗಿನ ಸಂಸದರಾಗಿದ್ದ, ಕಾಂಗ್ರೆಸ್‌ನ (ಪ್ರಸ್ತುತ ಬಿಜೆಪಿಯಲ್ಲಿದ್ದಾರೆ) ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು1,80,000 ಕ್ಕಿಂತ ಹೆಚ್ಚು ಭರ್ಜರಿ ಮತಗಳ ಅಂತರದಿಂದ ಸೋಲಿಸಿದ್ದರು.

ಈ ಭಾರಿ ಗೆಲುವು ಮರುಕಳಿಸುವ ವಿಶ್ವಾಸ ಹೊಂದಿದ್ದ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಹಳಷ್ಟು ಅಸಮಧಾನ ವ್ಯಕ್ತವಾಗಿತ್ತು. ಸ್ವಪಕ್ಷದಲ್ಲಿಯೇ ಗೋ ಬ್ಯಾಕ್ ಶೋಭಾ ಅಭಿಯಾನ ನಡೆದಿದ್ದು ಕೊನೆಯ ಹಂತದಲ್ಲಿ ಶೋಭಾ ಅವರಿಗೆ ಟಿಕೆಟ್ ಸಿಕ್ಕಿತ್ತು. ಈ ಅದೃಷ್ಟ ಪರೀಕ್ಷೆಯಲ್ಲಿ ಮತ್ತೆ ಶೋಭಾ ಅವರಿಗೆ ವಿಜಯ ಒಲಿದುಬಂದಿದೆ. ಸದ್ಯ (2 ಗಂಟೆ ಸುಮಾರಿಗೆ) ಪ್ರಮೋದ್ ಮಧ್ವರಾಜ್ ಅವರಿಗಿಂತ ಬಾರೀ ಅಂತರದಲ್ಲಿ ಮುನ್ನಡೆ ಸಾಧಿಸಿರುವ ಶೋಭಾ 1,98,750 ಮತಗಳ ಮುನ್ನಡೆಯಲಿದ್ದಾರೆ.

Comments are closed.