ಮಂಗಳೂರು : ರಶಾಂಕ್ ಪ್ರೋಡಕ್ಷನ್ಸ್ ಅರ್ಪಿಸುವ ರೋಹಿತಾಶ್ವಿನ್ ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು. ಶರವು ಕ್ಷೇತ್ರದ ರಾಘವೇಂದ್ರ ಶಾಸ್ತ್ರೀ ಅವರು ಕ್ಲಾಪ್ ಮಾಡುವ ಮೂಲಕ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಚಲನ ಚಿತ್ರ ನಿರ್ಮಾಪಕರಾದ ಮೇಗಿನ ಮಾಲಾಡಿ ಬಾಲಕೃಷ್ಣ ಶೆಟಿ, ಕಿಶೋರ್ ಡಿ. ಶೆಟ್ಟಿ, ಸಾಹಿತಿ ಡಾ ನಾ.ದಾ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು, ಖ್ಯಾತ ಚಲನ ಚಿತ್ರ ನಟ ರೋಹಿತ್ ಕುಮಾರ್ ಕಟೀಲು , ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ನಿರ್ದೇಶಕ ಮಧು ಸುರತ್ಕಲ್ ನಿರ್ಮಾಪಕ ಶಮಂತ್ ಶೆಟ್ಟಿ ಕಟೀಲು, ನಿರ್ದೇಶಕ ಜೋಸೆಫ್ ನಿನಾಸಮ್, ಸಿಜೋ ಕೆ ಜೋಸ್, ನಾಯಕ ನಟ ಶ್ರೀಕಾಂತ್ ರೈ, ನಟಿ ಜಯಂತಿ ಅಡಿಗ, ಬಾಲಕೃಷ್ಣ ಶೆಟ್ಟಿ ಪುತ್ತೂರು, ಉದ್ಯಮಿ ಜಗನ್ನಾಥ ರೈ ಮೊದಲಾದವರು ಉಪಸ್ಥಿತರಿದ್ದರು.
ಶಮಂತ್ ಶೆಟ್ಟಿ ಕಟೀಲು ನಿರ್ಮಾಣದ ಜೀಸೆಫ್ ನೀನಾಸಮ್ ನಿರ್ದೇಶನದ ರೋಹಿತಾಶ್ವಿನ್ ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಅಮ್ಮಚ್ಚಿಯೆಂಬ ನೆನಪುಗಳು ಸಿನಿಮಾದ ಬಳಿಕ ನಾನು ಕನ್ನಡದಲ್ಲಿ ನಟಿಸುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ನನ್ನ ಪಾತ್ರ ಕೂಡಾ ಚೆನ್ನಾಗಿದೆ ಎಂದು ಚಿತ್ರದ ನಾಯಕಿ ನಟಿ ವೈ ಜಯಂತಿ ಅಡಿಗ ತಿಳಿಸಿದರು.
ಸಿನಿಮಾಕ್ಕೆ ಹೊನ್ನಾಳಿ ಚಂದ್ರ ಶೇಖರ್ ಸಂಭಾಷಣೆ ಬರೆದಿದ್ದಾರೆ. ಸಿಜೋ ಕೆ. ಜೋಸ್ ಅವರ ಛಾಯಾಗ್ರಹಣವಿದೆ. ಸಂಗೀತ ಧ್ವನಿ, ಹಾಡುಗಳು ಡಾ.ಹೆಚ್.ವಿ ವೇಣು ಗೋಪಾಲ್ ಮತ್ತು ಹೊನ್ನಾಳಿ ಚಂದ್ರ ಶೇಖರ್, ಕಲೆ: ದಯೇಶ್ ಕರ್ಕೇರ, ಸಂಕಲನ: ಅರುಣ್, ನೃತ್ಯ ಸಂಯೋಜನೆ: ಚರಣ್ ಚೆನ್ನರಾಯ ಪಟ್ಟಣ, ನಿರ್ಮಾಣ ಕುಮಾರಸ್ವಾಮಿ ಆರ್, ಸಂದೀಪ್ ಹೆಗಡೆ, ಲಕ್ಷ್ಮಣ್, ಮುಖ್ಯ ತಾಂತ್ರಿಕ ನಿರ್ದೆಶಕರು: ಸೋನು ನಾಯಕ್, ಸಹಾಯಕ ನಿರ್ದೇಶಕರು: ಲಿಖೋಶ್, ಸಹ ನಿರ್ದೇಶಕರು : ಸಂದೀಪ್, ಧೀರಜ್ ಎಸ್. ನಿವ ಶೆಟ್ಟಿ ಮತ್ತು ನವೀನ್. ಕಥೆ, ಚಿತ್ರಕಥೆ, ನಿರ್ದೇಶನ ಜೋಸೆಫ್ ನಿನಾಸಂ.