ಕರಾವಳಿ

ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗ : 121 ಮಂದಿ ಋತ್ವಿಜರಿಂದ ರುದ್ರಪಾರಾಯಣ

Pinterest LinkedIn Tumblr

ಮಂಗಳೂರು : ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗ ದೇರೆಬೈಲು ಬ್ರ| ಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು‌. ಒಟ್ಟು 11 ಯಜ್ಞಕುಂಡದಲ್ಲಿ ತಲಾ 11 ಮಂದಿಯಂತೆ 121 ಮಂದಿ ಋತ್ವಿಜರು ರುದ್ರಪಾರಾಯಣಗೈದರು.

ಶ್ರೀ ಮಂಜುನಾಥದೇವಸ್ಥಾನಕದ್ರಿಯಲ್ಲಿ ಮಹಾದಂಡರುದ್ರಾಭಿಷೇಕದ ಸಂದರ್ಭ ಕ್ಷೇತ್ರದ ತಂತ್ರಿ ದೇರೆಬೈಲು ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ಮಹಾರುದ್ರಯಾಗ ಜರಗಿತು.

121 ಮಂದಿ ವೈದಿಕರುರು ದ್ರಪಠಣಮಾಡಿದರು. ಒಟ್ಟು 11 ಯಜ್ಞಕುಂಡಗಳನ್ನು ರಚಿಸಲಾಗಿತ್ತು. ತಲಾ 11 ಮಂದಿ ವೈದಿಕರು‌ ಒಟ್ಟು 1331 ಸಲ ನಮಕ ಹಾಗೂ 121 ಸಲ ಚಮಕ ಮಂತ್ರಗಳನ್ನು ಪಠಿಸುವ ಮೂಲಕ ತಂತ್ರಿಗಳ ಮಾರ್ಗದರ್ಶನದಲ್ಲಿ‌ ಋತ್ವಿಜರು ಮಹಾರುದ್ರಯಾಗ ನೆರವೇರಿಸಿದರು. ಲೋಕ ಕಲ್ಯಾಣಕ್ಕಾಗಿಮಳೆ ಬೆಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಯಾಗಕ್ಕೆ ಪೂರ್ಣಾಹುತಿ ಮಾಡಲಾಯಿತು.

ಈ ಸಂದರ್ಭಬ್ರಹ್ಮಕಲಶೋತ್ಸವಸಮಿತಿಯ‌ಅಧ್ಯಕ್ಷ‌ಎ.ಜೆ. ಶೆಟ್ಟಿ ಮತ್ತು ಸ್ವಾಗತ ಸಮಿತಿಯ ಸಂಚಾಲಕ ಸುಂದರ ಶೆಟ್ಟಿ, ದಿನೇಶ್‌ ದೇವಾಡಿಗ, ಗಣೇಶ್ ಶೆಟ್ಟಿ, ಪ್ರದೀಪಕುಮಾರಕಲ್ಕೂರ ಸಹಿತ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಸಹಸ್ತಾರು ಭಕ್ತಾದಿಗಳು ಪಾಲ್ಗೊಂಡರು. ಮಧ್ಯಾಹ್ನ ಸುಮಾರು 25 ಸಾವಿರಕ್ಕೂ‌ಅಧಿಕ ಮಂದಿ ಪ್ರಸಾದ ಭೋಜನ ಸ್ವೀಕರಿಸಿದರು.

Comments are closed.