ಅಂತರಾಷ್ಟ್ರೀಯ

ಕಾಬೂಲ್ ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಅಫ್ಘಾನ್ ಮಾಜಿ ಪತ್ರಕರ್ತೆ ಮೀನಾ ಬಲಿ

Pinterest LinkedIn Tumblr

ಕಾಬೂಲ್: ಮಾಜಿ ಟೆಲಿವಿಷನ್ ಪತ್ರಕತ್ರೆ ಹಾಗೂ ಸಲಹೆಗಾರ್ತಿಯೊಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದು ಹಾಕಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ತನಗೆ ಜೀವ ಬೆದರಿಕೆ ಇದೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದ ರಾಜಕೀಯ ಸಲಹೆಗಾರ್ತಿ ಮೀನಾ ಮಂಗಲ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಪ್ರಮುಖ ಟಿವಿ ಚಾನಲ್ ಅರಿಯಾನಾ ನ್ಯೂಸ್ ಮಾಜಿ ವರದಿಗಾರ್ತಿಯಾಗಿದ್ದ ಮಿನಾ ಮಂಗಲ್ ಅವರನ್ನು ಕಾಬೂಲ್ ನ ಅವರ ನಿವಾಸದ ಸಮೀಪ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ಪೊಲೀಸ್ ವಕ್ತಾರ ಬಸಿರ್ ಮುಜಾಹೀದ್ ತಿಳಿಸಿದ್ದಾರೆ.

ಅಫ್ಘಾನ್ ಸಂಸತ್ತಿನ ಸಾಂಸ್ಕೃತಿಕ ವ್ಯವಹಾರಗಳ ಆಯೋಗದ ಸಲಹೆಗಾರರಾಗಿದ್ದ ಮೀನಾ ಅವರನ್ನು ಯಾವ ಕಾರಣಕ್ಕೆ ಹತ್ಯೆಗೈಯಲಾಗಿದೆ ಎಂಬುದು ಇನ್ನೂ ತಿಳಿದಿಲ್ಲವಾದರೂ ಕೌಟುಂಬಿಕ ಕಲಹ ಇದರ ಹಿಂದಿನ ಕಾರಣವಾಗಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.

ಆದರೆ ಮೇ 3ರಂದು ಮೀನಾ “ತಮ್ಮ ಜೀವಕ್ಕೆ ಅಪಾಯವಿದೆ” ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು ಇಷ್ತಾಗಿ ಆಕೆ ರಕ್ಷಣೆಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಅವರಿಗೆ ಸರಿಯಾದ ಭದ್ರತೆ ಒದಗಿಸಿಲ್ಲ ಹಾಗಾಗಿ ಪತ್ರಕರ್ತೆಯ ಹತ್ಯೆ ನಡೆದಿದೆ ಎಂದು ಮಾನವ ಹಕ್ಕುಗಳ ವಕೀಲರು, ಮಹಿಳಾ ಹಕ್ಕುಗಳ ಅಭಿಯಾನ ಹೋರಾಟಗಾರು ವಝ್ಮಾ ಫ್ರೊಗ್ ಹೇಳಿದ್ದಾರೆ.

ಇದರ ನಡುವೆ ಹಿಂದೊಮ್ಮೆ ಮೀನಾ ಅವರನ್ನು ಅಪಹರಿಸಿದ್ದ ಗುಂಪಿನಿಂದಲೇ ಅವರ ಹತ್ಯೆಯಾಗಿರಬಹುದು ಎಂದು ಮೀನಾ ಅವರ ತಾಯಿ ಸಂದೇಹ ವ್ಯಕ್ತಪಡಿಸಿದ್ದಾರೆ.

Comments are closed.