ಕರಾವಳಿ

ಆಳ್ವಾಸ್’ನಲ್ಲಿ ಓದಿದ ಬಾರ್ಕೂರು ಮೂಲದ ವಿದ್ಯಾಶ್ರೀ ದೇವಾಡಿಗ ರಾಜ್ಯಕ್ಕೆ 3ನೇ ಸ್ಥಾನ

Pinterest LinkedIn Tumblr

ಉಡುಪಿ: ಮೂಡಬಿದಿರೆಯ ಆಳ್ವಾಸ್ ವಿದ್ಯಾರ್ಥಿನಿ ಮೂಲತಃ ಉಡುಪಿ ಜಿಲ್ಲೆಯ ಬಾರ್ಕೂರಿನ ನಿವಾಸಿ ವಿದ್ಯಾಶ್ರೀ ಯು. ದೇವಾಡಿಗ ಎ.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೬೨೩ ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿದ್ದಾರೆ.

 

ಬೆಂಗಳೂರಿನ ದೇವಾಡಿಗ ನವೋದಯ ಸಂಘದ ಸದಸ್ಯರಾದ ಬಾರ್ಕೂರು ಮೂಲದ ಉಮೇಶ್ ದೇವಾಡಿಗ ಹಾಗೂ ಪುಷ್ಪಾ ದೇವಾಡಿಗ ದಂಪತಿಗಳ ಪುತ್ರಿ ಈಕೆ. ಉಮೇಶ್ ಅವರು ಬೆಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿದ್ದು ತಾಯಿ ಪುಷ್ಪಾ ದೇವಾಡಿಗ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದಾರೆ.

Comments are closed.