ಮಂಗಳೂರು: ಕರ್ನಾಟಕ ಯಕ್ಷಭಾರತಿ ಪುತ್ತೂರು ಪ್ರಸ್ತುತ ಪಡಿಸುವ ‘ಗಂಗಾವತರಣ’ ಯಕ್ಷಗಾನ ತಾಳಮದ್ದಳೆ ಮೇ.3, 2019 ರಂದು ಶುಕ್ರವಾರ ರಾತ್ರಿ ಗಂ.9.30 ಕ್ಕೆ ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾಗಲಿದೆ. ಸೂರ್ಯವಂಶದ ಚಕ್ರವರ್ತಿ ಭಗೀರಥ ದೇವನದಿ ಗಂಗೆಯನ್ನು ಭುವಿಗಿಳಿಸುವ ಸುಂದರ ಕಥಾಭಾಗವಿರುವ ಈ ಆಖ್ಯಾನಕ್ಕೆ ಪ್ರೊ.ಅಮೃತ ಸೋಮೇಶ್ವರರ ‘ಅಮರವಾಹಿನಿ’ ಪ್ರಸಂಗದ ಪದ್ಯಗಳನ್ನು ಆಯ್ದುಕೊಳ್ಳಲಾಗಿದೆ ಎಂದು ಕರ್ನಾಟಕ ಯಕ್ಷಭಾರತಿಯ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ಟರ ಹಾಡುಗಾರಿಕೆಗೆ ಪಿ.ಟಿ.ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಹಿಮ್ಮೇಳ ನೀಡಿದ್ದಾರೆ. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ, ಎಂ.ಕೆ.ರಮೇಶಾಚಾರ್ಯ, ಗಣರಾಜ ಕುಂಬಳೆ, ರಮೇಶ ಸಾಲ್ವಣ್ಕರ್ ಮತ್ತು ಉಮೇಶ ಆಚಾರ್ಯ ಗೇರುಕಟ್ಟೆ ಅವರು ಅರ್ಥಧಾರಿ ಗಳಾಗಿರುವರು.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಸೂರ್ಯನಾರಾಯಣ ಭಟ್ ಅವರು ಈ ಯಕ್ಷಗಾನವನ್ನು ಧ್ವನಿಮುದ್ರಿಸಿ ಪ್ರಸಾರಕ್ಕೆ ಅಳವಡಿಸಿದ್ದಾರೆ.