ಕರಾವಳಿ

ಮೇ 2ರಿಂದ 11 : ಶ್ರೀ ಕ್ಷೇತ್ರ ಕದ್ರಿಯಲ್ಲಿ ಬ್ರಹ್ಮಕಲಶ-ಮಹಾದಂಡರುದ್ರಾಭಿಷೇಕ

Pinterest LinkedIn Tumblr

ಮಂಗಳೂರು, ಎಪ್ರಿಲ್.27 : ಶ್ರೀ ಕ್ಷೇತ್ರ ಕದ್ರಿಯಲ್ಲಿ ಮೇ 2ರಿಂದ 11ರವರೆಗೆ ಜರಗಲಿರುವ ಬ್ರಹ್ಮಕಲಶ ಮಹಾರುದ್ರಯಾಗ ಹಾಗೂ ಮಹಾದಂಡ ರುದ್ರಾಭಿಷೇಕ ಶ್ರೀ ಶ್ರೀರಾಜಾ ನಿರ್ಮಲನಾಥ್‌ಜೀ ಕದ್ರಿ ಮಠಾಧೀಶರ ಉಪಸ್ಥಿತಿಯಲ್ಲಿ ಹಾಗೂ ದೇರೆಬೈಲು ಬ್ರ| ಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿರುವುದು ಎಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ಟ್ರಸ್ಠಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ‌ ಅಧ್ಯಕ್ಷ ಡಾ. ಎ. ಜನಾರ್ದನ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾ. ಮೇ 02, ಗುರುವಾರ:
ವೈದಿಕ ಕಾರ್ಯಕ್ರಮ:  ದಿವಾ ಗಂಟೆ 7 ರಿಂದ :ಸಾಮೂಹಿಕ ಪ್ರಾರ್ಥನೆ, ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ, ಪುಣ್ಯಾಹ, ಮಧುಪರ್ಕ, ಅಗ್ನಿಜನನ, ಆಧ್ಯಗಣಯಾಗ, ಸಂಜೆ 6ರಿಂದ ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ದಿಕ್ಷಾಲಬಲಿ, ಮಲರಾಯ ಭಂಡಾರ ಆಗಮನ, ಧ್ವಜರೋಹಣ, ಭೇರಿತಾಡನ, ಅಂಕುರಾರೋಹಣ, ಉತ್ಸವ ಬಲಿ, ಭೂತ ಬಲಿ.ಜರಗಲಿದೆ.

ಧಾರ್ಮಿಕ ಸಭಾಕಾರ್ಯಕ್ರಮ ಸಂಜೆ 6 ರಿಂದ: ಧಾರ್ಮಿಕ ಸಭೆಕದ್ರಿಯೋಗೀಶ್ವರ ಮಠದ ಶ್ರೀ ನಿರ್ಮಲನಾಥ್‌ಜೀಗೌರವ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ‌ಒಡಿಯೂರುಗುರುದೇವಾನಂದ ಸ್ವಾಮೀಜಿಯವರಿಂದ ಆಶೀರ್ವಚನ, ಕಟೀಲು ವಾಸುದೇವ‌ಆಸ್ರಣ್ಣರಿಂದ ದೀಪ ಪ್ರಜ್ವಲನೆ. ಬ್ರ| ಶ್ರೀ ದೇರೆಬೈಲು ವಿಠಲದಾಸ ತಂತ್ರಿಗಳಿಂದ ಧಾರ್ಮಿಕ‌ಉಪನ್ಯಾಸ‌ಅತಿಥಿಗಣ್ಯರ ಉಪಸ್ಥಿತಿಯಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ‌ ಅಧ್ಯಕ್ಷರಾದ ಡಾ. ಎ. ಜನಾರ್ದನ ಶೆಟ್ಟಿ‌ ಅವರ‌ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಇದೇ ಸಂದರ್ಭ ಸಾಧಕರಾದ ನಾಗೇಶ್ ಎ. ಬಪ್ಪನಾಡು, ದೂಮಪ್ಪ ಮೇಸ್ತ್ರಿ, ವಸಂತಕದ್ರಿ, ಗೋವಿಂದ ಮೊಗ್ರಾಲ್ ಮೊದಲಾದವರನ್ನು ಸನ್ಮಾನಿಸಲಾಗುವುದು.

ಸಂಜೆ 4ರಿಂದಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ 4ರಿಂದ 5 ರವರೆಗೆ ವಿದುಷಿ ಶಾಲಿನಿ ಆತ್ಮ ಭೂಷಣ್, ನೃತ್ಯೋಪಾಸನ ಕಲಾಕೇಂದ್ರ (ರಿ) ರವರಿಂದ ಭರತನಾಟ್ಯ ಸಂಜೆ ೫ ರಿಂದ ೬ ರವರೆಗೆಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ವಿಶಾರದ ಶ್ರೀ ನಾಗೇಶ್ ಬಪ್ಪನಾಡು‌ ಇವರಿಂದ ನಾಗಸ್ವರ ಸಂಗೀತಕಚೇರಿ ಹಾಗೂ ರಾತ್ರಿ 8 ರಿಂದ 11ರವರೆಗೆ ಶರತ್‌ಕುಮಾರ್‌ಕದ್ರಿಯವರ ಸಂಯೋಜನೆಯಲ್ಲಿಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕದ್ರಿಕ್ಷೇತ್ರ ಮಹಾತ್ಮೆ ಯಕ್ಷಗಾನ ಜರಗಲಿದೆ.

ತಾ. ಮೇ 10,, ಶುಕ್ರವಾರ
ವೈದಿಕ ಕಾರ್ಯಕ್ರಮ:  ಮುಂಜಾನೆ5.30ರಿಂದ ಪುಣ್ಯಾಹ, ಕವಾಟೋದ್ಘಾಟನೆ, ಗಣಯಾಗ, ಅಮೃತೇಶ್ವರಿ ಪೂಜೆ, ಮಹಾದಂಡರುದ್ರಾಭೀಷೇಕ ಪ್ರಾರಂಭ, ಮಹಾರುದ್ರಯಾಗ, ಪೂರ್ಣಾಹುತಿ ಮಹಾಪೂಜೆ, ರಾತ್ರಿ 7. ಅವಭೃತ, ಧ್ವಜಾರೋಹಣ ನಡೆಯಲಿರುವುದು.

ಸಂಜೆ 6 ರಿಂದಧಾರ್ಮಿಕ ಸಭಾ : ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಶ್ರೀಪಾದರು ಆಶೀರ್ವಚನ ನೀಡಲಿರುವರು. ಶರವುರಾಘವೇಂದ್ರ ಶಾಸ್ತ್ರಿಗಳು ದೀಪಪ್ರಜ್ವಲನೆ ಮಾಡುವರು. ಕಾರ್ಪೋರೇಷನ್ ಬ್ಯಾಂಕ್‌ನಚೆಯರ್‌ಮೆನ್ ಶ್ರೀಮತಿ ಪಿ.ವಿ. ಭಾರತಿ ಸಭಾಧ್ಯಕ್ಷತೆ ವಹಿಸಲಿದ್ದು, ಅತಿಥಿಗಣ್ಯರ ಸಮ್ಮುಖದಲ್ಲಿ ಶ್ರೀ ಕ್ಷೇತ್ರದ‌ಅರ್ಚಕರಾದರಾಮಚಂದ್ರ ಭಟ್, ಭಾಸ್ಕರ ಭಟ್, ಧಾರ್ಮಿಕದತ್ತಿ‌ಇಲಾಖೆಯ ನಿವೃತ್ತ ತಹಶೀಲ್ದಾರ ಶ್ರೀಮತಿ ಮೋಹಿನಿ ಶೆಟ್ಟಿ ಮೊದಲಾದವರಿಗೆ ಸನ್ಮಾನ ನಡೆಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ 4ರಿಂದ 6ರವರೆಗೆ‌ಉಪ್ಪುಂದರಾಜೇಶ್ ಪಡಿಯಾರ್ ಮೈಸೂರು‌ ಇವರ ತಂಡದವರಿಂದ ಸಿ. ಅಶ್ವಥ್ ಹಾಡಿರುವ ಗಾಯನಗಳು ಮತ್ತುರಾತ್ರಿ 8ರಿಂದ 11 ಅಂತರಾಷ್ಟ್ರೀಯ ಸಾಕ್ಸೋಫೋನ್ ವಾದಕಕಲೈಮಾಮಣಿ ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ ಬಳಗದವರಿಂದ ಸಾಕ್ಸೋಫೋನ್‌ಕಛೇರಿ ನಡೆಯಲಿದೆ

ತಾ. ಮೇ 11, ಶನಿವಾರ
ವೈದಿಕ ಕಾರ್ಯಕ್ರಮ: ಬೆಳಿಗ್ಗೆ ಗಂಟೆ 7.45 ರಿಂದ ಶ್ರೀ ಮಂಜುನಾಥದೇವರಿಗೆ ಕಲಶಾಭಿಷೇಕ, ಮಧ್ಯಾಹ್ನಗಂಟೆ 12.30ಕ್ಕೆ ಶ್ರೀ ಅಣಪ್ಪದೈವಕ್ಕೆ ಪರ್ವ ಸೇವೆ, ರಾತ್ರಿ 9ರಿಂದ: ಮಹಾರಂಗಪೂಜೆ, ಬೆಳ್ಳಿರಥೋತ್ಸವ, ಶ್ರೀ ಮಲರಾಯ, ಶ್ರೀ ವೈದ್ಯನಾಥ, ಶ್ರೀ ಪಿಲಿಚಾಮುಂಡಿ ನೇಮೋತ್ಸವ ಜರಗಲಿರುವುದು ಎಂದು ಎ.ಜೆ.ಶೆಟ್ಟಿ ತಿಳಿಸಿದ್ದಾರೆ.

ಶಾಸಕರಾದ ಡಿ. ವೇದವ್ಯಾಸಕಾಮತ್‌ರಗೌರವಾಧ್ಯಕ್ಷತೆಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ವಿವಿಧ ಸಮಿತಿ ಗಳನ್ನು ರಚಿಸಲಾಗಿದೆ. ಡಾ. ಎ. ಜನಾರ್ದನ ಶೆಟ್ಟಿ ಬ್ರಹ್ಮಕಲಶೋತ್ಸವ ಸಮಿತಿಯ‌ ಅಧ್ಯಕ್ಷರಾಗಿರುವರು. ಕ್ಷೇತ್ರದ ಪ್ರಧಾನತಂತ್ರಿ ಬ್ರ| ಶ್ರೀ ವಿಠಲದಾಸ ತಂತ್ರಿಗಳ ನೇತೃತ್ವದಲ್ಲಿಧಾರ್ಮಿಕ ಸಮಿತಿಕಾರ್ಯನಿರ್ವಹಿಸಲಿದ್ದು ,ಡಾ. ಎ. ಜನಾರ್ದನ ಶೆಟ್ಟಿ‌ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾಗಿರುವರು.

ಶ್ರೀ ಸುಂದರ ಶೆಟ್ಟಿ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾಗಿರುವರು. ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ ದಿನೇಶ್‌ದೇವಾಡಿಗರು‌ಅನ್ನ ಸಂತರ್ಪಣೆ ಮೇಲ್ವಿಚಾರಣೆ ಸಮಿತಿಯ ಸಂಚಾಲಕತ್ವವನ್ನು ವಹಿಸಲಿದ್ದಾರೆ. ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾಗಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿಯ ಪ್ರಧಾನ ಸಂಚಾಲಕತ್ವವನ್ನು ಕಿಶೋರ್‌ ಡಿ. ಶೆಟ್ಟಿನಿ ರ್ವಹಿಸಲಿರುವರು.

ಪಾರ್ಕಿಂಗ್ ಮತ್ತು ವಾಹನ ನಿಲುಗಡೆ ಮೇಲ್ವಿಚಾರಣೆ ಸಂಚಾಲಕರಾಗಿ ಕದ್ರಿ ಫ್ರೆಂಡ್ಸ್‌ಅಧ್ಯಕ್ಷ ಚಂದ್ರಹಾಸ್ ನಿರ್ವಹಿಸುವರು. ನೀರು ಸರಬರಾಜು ಸಮಿತಿಯ ಪ್ರಧಾನ ಸಂಚಾಲಕರಾಗಿ‌ ಅಶೋಕ್‌ ಡಿ.ಕೆ. ನೈರ್ಮಾಲ್ಯ ಸಮಿತಿಯ ಪ್ರಧಾನ ಸಂಚಾಲಕರಾಗಿ ಬಾಲಕೃಷ್ಣ ಕೊಟ್ಟಾರಿ ಹಾಗೂ ಸ್ವಯಂ ಸೇವಕರ‌ ಉಸ್ತುವಾರಿ ಪ್ರಧಾನ ಸಂಚಾಲಕರಾಗಿ ನವನೀತ ಶೆಟ್ಟಿ ಹಾಗೂ ಪುರುಷೋತ್ತಮ ಕೊಟ್ಟಾರಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಇವರೆಲ್ಲರ ಸಂಚಾಲಕತ್ವದಲ್ಲಿ ವ್ಯವ್ಯಸ್ಥಾಪನಾ ಸಮಿತಿ ಸದಸ್ಯರು ಹಾಗೂ ಉಪಾಧ್ಯಕ್ಷರು, ಸಹಾಯಕ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಮತ್ತು ಶ್ರೀ ದೇವಳದ ಅರ್ಚಕ ವೃಂದ, ಸಿಬ್ಬಂದಿ ವರ್ಗ ಹಾಗೂ ನೂರಾರು ಮಂದಿ ವಿವಿಧ ಸಮಿತಿಗಳಲ್ಲಿ ಸ್ವಯಂಸ್ಪೂರ್ತಿಯಿಂದ ಕಾರ್ಯನಿರ್ವಹಿಸಲಿರುವರು  ಎಂದವರು ವಿವರ ನೀಡಿದರು.

Comments are closed.