ಗಲ್ಫ್

ಐದನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ “ಕನ್ನಡ ಮಿತ್ರ” ಪ್ರಶಸ್ತಿ ಪ್ರಧಾನ ನೆರವೇರಿಸಿದ “ಕನ್ನಡ ಪಾಠ ಶಾಲೆ ದುಬೈ

Pinterest LinkedIn Tumblr

ದುಬೈನ ಅನಿವಾಸಿ ಭಾರತೀಯರ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಕಾ ಸೇವೆನೀಡುತ್ತಿರುವ “ಕನ್ನಡ ಮಿತ್ರರು ಯು.ಎ.ಇ” ತನ್ನ ಕನ್ನಡ ಪಾಠ ಶಾಲೆ ದುಬೈನ ಐದನೇ ವರ್ಷದ ವಾರ್ಶಿಕೋತ್ಸವವನ್ನು 26 ಏಪ್ರಿಲ್ 2019 ರಂದು, ಜೆ.ಎಸ್.ಎಸ್. ಪ್ರೈವೇಟ್ ಸ್ಕೂಲ್ ದುಬೈನ ಸಭಾಂಗಣದಲ್ಲಿ ಅದ್ಧೂರಿಯಾಗಿ ಆಚರಿಸಿ ಜನ ಮನ ಸೂರೆಗೊಂಡರು.

ಸಮಯ ಪಾಲನೆಗೆ ಹೆಸರಾದ ಕನ್ನಡ ಮಿತ್ರರು ಸಮಾರಂಭವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಿಸಿ ಮುನ್ನಡೆಸಿದ ರೀತಿ ಸಭಿಕರನ್ನು ಬೆರಗುಗೊಳಿಸಿತು. ಕನ್ನಡನಾಡಿನಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪಾಂಡವಪುರದ, ಪುಸ್ತಕ ಮನೆ ಖ್ಯಾತಿಯ ಶ್ರೀ.ಅಂಕೆ ಗೌಡರು ಮತ್ತು ಕನ್ನಡ ಪ್ರಚಾರಕರಾದ ಶ್ರೀ ನಾಗರಾಜ ಕೆ ( ಓಂಕಾರಪ್ರಿಯ ಬಾಗೆಪಲ್ಲಿ) ಯವರನ್ನು “ಕನ್ನಡ ಮಿತ್ರ” ಪ್ರಶಸ್ತಿಗೆ ಆಯ್ಕೆಮಾಡಿ ದುಬೈಗೆ ಬರಮಾಡಿಕೊಂಡು ಇದೇ ಸಮಾರಂಭದಲ್ಲಿ ಪುರಸ್ಕರಿಸಿ ಗೌರವಿಸಲಾಯಿತು.

ಶ್ರೀಮತಿ ಶಿಲ್ಪ ಸಿದ್ದಲಿಂಗೇಶ್ ಮತ್ತು ಶ್ರೀಮತಿ ಕಾವ್ಯಶ್ರೀ ಯುವರಾಜ್ ರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷ ಹಾಗು ಫಾರ್ಚೂನ್ ಗ್ರೂಪ್ ಹೊಟೆಲ್ಸ್ ನ ಒಡೆಯರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ , ಕನ್ನಡ ಮಿತ್ರರು ಯು.ಎ.ಇ ಅಧ್ಯಕ್ಷ ಶ್ರೀ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ಶ್ರೀ ಸಿದ್ದಲಿಂಗೇಶ್ ಬಿ.ಆರ್ ಹಾಗು ಗಣ್ಯ ಅತಿಥಿಯಾಗಿ ಜೆ.ಎಸ್.ಎಸ್. ವಿದ್ಯಾಸಂಸ್ಥೆಗಳು ದುಬೈನ ಮುಖ್ಯ ಕಾರ್ಯನಿರ್ವಹಣಾದಿಕಾರಿ ಯಾಗಿರುವ ಡಾ||ಶಿವಕುಮಾರ್ ಡಿ.ಪಿ, ದುಬೈನ ಖ್ಯಾತ ಉದ್ಯಮಿ ಹಾಗು ಕನ್ನಡ ಸಿನಿಮಾ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ , ದುಬೈನ ಖ್ಯಾತ ಉದ್ಯಮಿ ಹಾಗು ಕನ್ನಡಾಭಿಮಾನಿಗಳಾದ ಶ್ರೀ ಗುಣಶೀಲ ಶೆಟ್ಟಿ, ಕನ್ನಡಿಗರು ದುಬೈ ನ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಗೌಡ, ಕರ್ನಾಟಕ ಸಂಘ ಶರ್ಜಾ ಅಧ್ಯಕ್ಷ ಶ್ರೀ ಆನಂದ ಬೈಲೂರು, ಕರ್ನಾಟಕ ಸಂಘ ದುಬೈನ ಅಧ್ಯಕ್ಷ ಶ್ರೀ.ಕೃಷ್ಣರಾಜ ತಂತ್ರಿ, ಬ್ಯಾರೀಸ್ ಕಲ್ಚರಲ್ ಫೂರಂ ನ ಶ್ರೀ ಎಂ.ಇ.ಮೂಳೂರು, ಅಸಾಪ್ ಟ್ಯೂಟರ್ಸ್ ನ ಶ್ರೀ ಓಂಪ್ರಕಾಶ್ ಬೊರುಶೆಟ್ಟಿ ಹಾಗು ಧ್ವನಿ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಾವ್ ಪಯಾರ್ ತಯ್ನಾಡಿನಿಂದ ಆಗಮಿಸಿದ್ದ ಅತಿಥಿಗಳಿಗೆ “ಕನ್ನಡ ಮಿತ್ರ” ಪ್ರಶಸ್ತಿ ಪ್ರಧಾನ ಮತ್ತು ಕನ್ನಡ ಪಾಠ ಶಾಲೆಯ ಮಕ್ಕಳಿಗೆ ಪ್ರಮಾಣಪತ್ರ ಮತ್ತು ಪದಕ ನೀಡಿ ಸಭಾಕಾರ್ಯಕ್ರಮ ನೆರವೇರಿಸಿದರು.

ಶ್ರೀ ಶಶಿಧರ್ ನಾಗರಾಜಪ್ಪನವರು “ಕನ್ನಡ ಮಿತ್ರರು ಯು.ಎ.ಇ” ತಂಡಕ್ಕಾಗಿ ಬೆರದಿದ್ದ ಸಾಹಿತ್ಯಕ್ಕೆ ಸಂಗೀತ ನಿರ್ದೇಶಕ ಶ್ರೀ. ವೀರ್ ಸಮರ್ಥ ರಾಗಸಂಯೋಜೆ ಮಾಡಿ ಶ್ರೀ ಅನಿರುದ್ಧ ಶಾಸ್ತ್ರಿ ಹಾಡಿರುವ ಗೀತೆಯನ್ನು ಐದನೇವರ್ಷದ ಸಂಭ್ರಮಾಚರಣೆಯ ಅಂಗವಾಗಿ ಅತಿಥಿಗಳೆಲ್ಲರೂ ಸೇರಿ ಬಿಡುಗಡೆಗೊಳಿಸಿದರು, ಈ ಗೀತೆಯ ನಿರ್ಮಾಣದಲ್ಲಿ ಸಹಕರಿಸಿದ ಶ್ರೀ ವಿಜಯ್ ಭರಮಸಾಗರ ರವರಿಗೆ ಧನ್ಯವಾದ ನೀಡಲಾಯಿತು.

ಇದೇ ಸಂದರ್ಭದಲ್ಲಿ ಕನ್ನಡ ಮಿತ್ರರು ಯು.ಎ.ಇ ವತಿಯಿಂದ ಅನುಷ್ಟಾನಗೊಳಿಸಿರುವ “ಕಡಲಾಚೆಯಿಂ ಕರುನಾಡಿಗೆ” ಎಂಬ ಕರ್ನಾಟಕದ ಸರ್ಕಾರಿ ಕನ್ನಡ ಮಾದ್ಯಮ ಶಲೆಗಳಿಗೆ “ಸ್ಮಾರ್ಟ್ ಕ್ಲಾಸ್” ಅನುದಾನದ ಬಗ್ಗೆ ವಿವರಿಸಿ, ಸಂಘದ ವತಿಯಿಂದ ಲ್ಯಾಪ್ ಟಾಪ್ ಕಂಪ್ಯೊಟರ್, ಪ್ರೊಜೆಕ್ಟರ್ ಮತ್ತು ಪ್ರಿಂಟರ್ ನೀಡಲಾಗುತ್ತಿದ್ದು, ಸಭಿಕರೆಲ್ಲರ ಸಹಯೋಗ ಕೋರಲಾಯಿತು.

ಕನ್ನಡ ಪಾಠ ಶಾಲೆ ದುಬೈ ನಲ್ಲಿ ಮೂರು ವರ್ಷಕ್ಕೂ ಅಧಿಕ ವಾಗಿ ಸೇವೆ ಸಲ್ಲಿಸಿರುವ ಶಿಕ್ಷಕಿಯರಾದ ಶ್ರೀಮತಿ ಪ್ರೇಮಲತಾ ಲೋಹಿತ್ , ಶ್ರೀಮತಿ ರೂಪಾ ಶಶಿಧರ್ , ಶ್ರೀಮತಿ ಶಿಲ್ಪ ಸಿದ್ದಲಿಂಗೇಶ್, ಶ್ರೀಮತಿ ಕಾವ್ಯ ಯುವರಾಜ್ ಮತ್ತು ಶ್ರೀಮತಿ ಕಾಮಾಕ್ಷಿ ಸುರೇಶ್ ರವರಿಗೆ “ಕನ್ನಡ ಕೌಸ್ತುಭ” ಎಂಬ ವಿಶೇಷ ಸೇವಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಹಾಗೆಯೇ, ಪ್ರಸಕ್ತ ಸಾಲಿನಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರಾದ ಶ್ರೀಮತಿ ಪ್ರೇಮಲತಾ ಲೋಹಿತ್ , ಶ್ರೀಮತಿ ರೂಪಾ ಶಶಿಧರ್ , ಶ್ರೀಮತಿ ಶಿಲ್ಪ ಸಿದ್ದಲಿಂಗೇಶ್, ಶ್ರೀಮತಿ ಕಾವ್ಯ ಯುವರಾಜ್, ಶ್ರೀಮತಿ ಮಾನಸ ವಿನಯ್ ,ಶ್ರೀಮತಿ ಅನುಷಾ ಕಾಮತ್ ,ಶ್ರೀಮತಿ ಚೇತನಾ ಗವಾಸ್ಕರ್, ಶ್ರೀಮತಿ ಮೀರಾ ವಿನೀತ್ ರಾಜ್ ಮತ್ತು ಶ್ರೀಮತಿ ಸುಚಿತ್ರ ರವರಿಗೆ ಕಿರುಕಾಣಿಕೆಯನ್ನು ನೀಡಿ ಗೌರವಿಸಲಾಯಿತ್ತು.

ಮಕ್ಕಳಿಗೆ ಕನ್ನಡ ಪರಿಣಿತಿ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಹಾಗೆಯೇ ಶೇಕಡ ನೂರರಷ್ಟು ಹಾಜರಾತಿ ಇದ್ದ ಮಕ್ಕಳನ್ನು ಪುರಸ್ಕರಿಸಲಾಯಿತ್ತು.

ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮನಗೆದ್ದವು. ಮಕ್ಕಳೂಂದಿಗೆ ಹೆಜ್ಜೆ ಹಾಕಿ ನಟಿ ಹರ್ಷಿಕಾ ಪೂಣಚ್ಚ ಸಂಭ್ರಮ ಪಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಪಾಠ ಶಾಲೆಯ ಮಕ್ಕಳಾದ ಸಿಂಚನ ಮತ್ತು ಪ್ರತ್ಯುಷ್ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪ್ರೇಮಾ ಲೋಹಿತ್ ಮತ್ತು ಶ್ರೀಮತಿ ಕಾವ್ಯ ಯುವರಾಜ್ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕನ್ನಡ ಮಿತ್ರರು ಯು.ಎ.ಇ ಉಪಾಧ್ಯಕ್ಷರಾದ ಶ್ರೀ ಸಿದ್ಧಲಿಂಗೇಶ್ ಮತ್ತು ಸದಸ್ಯರಾದ ಶ್ರೀ ಶಿವ ಶರಣಪ್ಪ ಮೇಟಿ, ಶ್ರೀ ಸುನಿಲ್ ಗವಾಸ್ಕರ್, ಶ್ರೀ ವಿಜಯ್, ಶ್ರೀ ಪುಟ್ಟರಾಜು ಗೌಡ, ಶ್ರೀ ಗಿರೀಶ್ ಕಳ್ಕೊಂಡ್, ಶ್ರೀ ಜಿತೇಂದ್ರ, ಶ್ರೀ ನಾಗರಾಜ ರಾವ್, ಶ್ರೀ ಯುವರಾಜ್, ಶ್ರೀ ವಿನೀತ್, ಶ್ರೀ ಹರೀಶ್ ಕೋಡಿ,ಶ್ರೀ ಸುಧೀರ್ ಭಂಡಾರಿ,ಶ್ರೀ ವೆಂಕಟರಮಣ ಕಾಮತ್, ಶ್ರೀ ಗಿರೀಶ್ ಪಟವಾರಿ, ಶ್ರೀ ಮಹದೇವ್, ಶ್ರೀ ರಾಜಕುಮಾರ್, ಶ್ರೀ ಓಂಕಾರ್, ಶ್ರೀ ಪಿ ವಾಡೆಕರ್ ಶ್ರೀ ವಿನಯ್, ಶ್ರೀ ಹರೀಶ್ ಹೊರ್ಕೆ, ಶ್ರೀ ಸಂತೋಷ್ ,ಶ್ರೀ ಹರ್ಷ ಉಪಸ್ಥಿತರಿದ್ದರು. ಶ್ರೀಮತಿ ಮೀರಾ ವಿನೀತ್ ವಂದನಾರ್ಪಣೆಯನ್ನು ನಡೆಸಿಕೊಟ್ಟರು.

Comments are closed.