ಕರ್ನಾಟಕ

ಲೋಕ ಸಮರ; ಮಧ್ಯಾಹ್ನ 1 ಗಂಟೆ ವೇಳೆಗೆ ಕರ್ನಾಟಕದಲ್ಲಿ ಎಷ್ಟು ಶೇಕಡಾ ಮತದಾನ ಆಗಿದೆ ನೋಡಿ…

Pinterest LinkedIn Tumblr

ಬೆಂಗಳೂರು: ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ಇಂದು ನಡೆಯುತ್ತಿಯುವ ಮತದಾನ ಪ್ರಕ್ರಿಯೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಶೇ. 36.31ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಮದ್ಯಾಹ್ನ1 ಗಂಟೆಯವರೆಗೂ ಶೇ.36.31ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದ್ದು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಶೇ.28.65ರಷ್ಟು ಮತದಾನವಾಗಿದ್ದು, ಮಂಡ್ಯದಲ್ಲಿ ಶೇ. 37.69ರಷ್ಟು ಮತದಾನವಾಗಿದೆ.

ಇನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ. 29.69ರಷ್ಟು ಮತದಾನ, ಬೆಂಗಳೂರು ದಕ್ಷಿಣದಲ್ಲಿ ಶೇ. 30.70ರಷ್ಟು ಮತದಾನವಾಗಿದೆ. ಅಂತೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ.32.36ರಷ್ಚು ಮತದಾನವಾಗಿದೆ ಎಂದು ತಿಳಿದುಬಂದಿದೆ. ಉಳಿದಂತೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇ.35.69ರಷ್ಟು, ಚಾಮರಾಜನಗರದಲ್ಲಿ ಶೇ.36.37ರಷ್ಟು. ಚಿಕ್ಕಬಳ್ಳಾಪುರದಲ್ಲಿ ಶೇ.37.59ರಷ್ಟು, ಚಿತ್ರದುರ್ಗದಲ್ಲಿ ಶೇ.35.48ರಷ್ಟು, ದಕ್ಷಿಣ ಕನ್ನಡದಲ್ಲಿ ಶೇ.48.84ರಷ್ಟು, ಕೋಲಾರ ಶೇ. 38.2 ರಷ್ಟು, ತುಮಕೂರು ಶೇ.38.58ರಷ್ಟು, ಹಾಸನದಲ್ಲಿ ಶೇ.43.49ರಷ್ಟು ಮತ್ತು ಉಡುಪಿ-ಚಿಕ್ಕಮಗಳೂರು ಶೇ.45.43ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

Comments are closed.