ಕರಾವಳಿ

ಲೋಕಸಭಾ ಚುನಾವಣೆ : ದ.ಕ.ಜಿಲ್ಲೆಯಲ್ಲಿ 3 ಗಂಟೆಯ ವೇಳೆಗೆ ಶೇಖಡ 60.02 ಮತದಾನ – ಎಲ್ಲೆಲ್ಲಿ ಎಷ್ಟು ವಿವರ ಇಲ್ಲಿದೆ..

Pinterest LinkedIn Tumblr

ಮಂಗಳೂರು, ಎಪ್ರಿಲ್.18 : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇಖಡ 60.02 ಮತದಾನವಾಗಿದೆ.

ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9ಗಂಟೆ ವೇಳೆಗೆ ಶೇ.14. ರಷ್ಟು ಮತದಾನವಾಗಿದ್ದು, ಬಳಿಕ 11 ಗಂಟೆಗೆ ಶೇಖಡ 32.34ರಷ್ಟು ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮಂದಿ ಮತದಾನ ಮಾಡಿದ್ದಾರೆ.

11 ಗಂಟೆಯ ವೇಳೆಗೆ ಬೆಳ್ತಂಗಡಿಯಲ್ಲಿ ಶೇಖಡ 33.80 ಮೂಡಬಿದ್ರೆ ಶೇಖಡ 31.65 ಬಂಟ್ವಾಳ ಶೇಖಡ 33.89 ಪುತ್ತೂರು ಶೇಖಡ 33.16 ಸುಳ್ಯ ಶೇಖಡ 33.65 ಮಂಗಳೂರು ಉತ್ತರ ( ಸುರತ್ಕಲ್) ಶೇಖಡ31.91 ಮಂಗಳೂರು ದಕ್ಷಿಣ ಶೇಖಡ 29.63 ಹಾಗೂ ಮಂಗಳೂರು (ಉಳ್ಳಾಲ) ಶೇಖಡ 31.33 ಮತದಾನವಾಗಿದೆ.

3 ಗಂಟೆಯ ಬಳಿಕ ಶೇಖಡ 60.02 ಮತದಾನ :

11 ಗಂಟೆಯ ವೇಳೆಗೆ ಬೆಳ್ತಂಗಡಿಯಲ್ಲಿ ಶೇಖಡ 60.57 ಮೂಡಬಿದ್ರೆ ಶೇಖಡ 54.02 ಬಂಟ್ವಾಳ ಶೇಖಡ 62.05 ಪುತ್ತೂರು ಶೇಖಡ 64.06 ಸುಳ್ಯ ಶೇಖಡ 65.04 ಮಂಗಳೂರು ಉತ್ತರ ( ಸುರತ್ಕಲ್) ಶೇಖಡ 58.33 ಮಂಗಳೂರು ದಕ್ಷಿಣ ಶೇಖಡ 54.49 ಹಾಗೂ ಮಂಗಳೂರು (ಉಳ್ಳಾಲ) ಶೇಖಡ 57.42 ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಪುತ್ತೂರು ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದೆ.

Comments are closed.