ಕರ್ನಾಟಕ

ಪಾಂಡವಪುರ: ಮತ ಚಲಾಯಿಸಿ ಮಗುವಿಗೆ ಜನ್ಮ ನೀಡಿದ ತಾಪಂ ಸದಸ್ಯೆ

Pinterest LinkedIn Tumblr

ಪಾಂಡವಪುರ: ಮಹಿಳೆಯೊಬ್ಬರು ಮತ ಚಲಾಯಿಸಿ ಬಂದು ಮಗುವಿಗೆ ಜನ್ಮ ನೀಡಿದ ವಿಶೇಷ ಪ್ರಸಂಗ ಮಂಡ್ಯದ ಪಾಂಡವಪುರದಲ್ಲಿ ನಡೆದಿದೆ.

ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ ಮಂಗಳ ನವೀನ್ ಕುಮಾರ್ ಮತ ಚಲಾಯಿಸಿದ ತಾಯಿಯಾದ ಮಹಿಳೆಯಾಗಿದ್ದಾರೆ. ಇವರು ತಾಲೂಕ್ ಪಂಚಾಯತ್ ಸದಸ್ಯರು ಕೂಡ ಆಗಿರುವುದು ವಿಶೇಷ.

ತುಂಬು ಗರ್ಭಿಣಿಯಾಗಿದ್ದ ಮಂಗಳ ಚಿಕ್ಕಮರಳಿ ಗ್ರಾಮದ ಮತಗಟ್ಟೆಯಲ್ಲಿ ಬೆಳಿಗ್ಗೆ7.30ಕ್ಕೆ ಬಂದು ಮತ ಚಲಾಯಿಸಿದ್ದರು. ಪತಿ ನವೀನ್ ಸಹ ಅವರೊಂದಿಗಿದ್ದು ತಮ್ಮ ಹಕ್ಕು ಚಲಾಯಿಸಿದ್ದರು.

ಬಳಿಕ ಮನೆಗೆ ತೆರಳಿದ ಮಂಗಳ ಅವರಿಗೆ ಹುಟ್ಟೆ ನೋವು ಕಾಣಿಸಿಕೊಂಡಿದೆ . ತಕ್ಷಣ ಮಂಗಳ ಅವರನ್ನು ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ಅಲ್ಲಿ ಮಂಗಳ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ – ಮಗು ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.