ಮನೋರಂಜನೆ

ಪುತ್ರಿ ಶ್ರುತಿಯೊಂದಿಗೆ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಕಮಲ್​ ಹಾಸನ್​, ರಜಿನಿಕಾಂತ್‌

Pinterest LinkedIn Tumblr

ಚೆನ್ನೈ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಭರದಿಂದ ಸಾಗುತ್ತಿದ್ದು, ನಟ ನಟಿಯರು ಮುಂಜಾನೆಹಯಿಂದಲೇ ಮತ ಚಲಾಯಿಸುತ್ತಿದ್ದಾರೆ. ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಮತ್ತು ರಾಜಕಾರಣಿ ಕಮಲ್‌ ಹಾಸನ್‌ ತಮ್ಮ ಪುತ್ರಿ ಶ್ರುತಿ ಹಾಸನ್‌ ಅವರೊಂದಿಗೆ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಮಕ್ಕಳ್​ ನೀದಿ ಮೈಯಂ ಪಕ್ಷದ ನಾಯಕ ಕಮಲ್​ ಹಾಸನ್​ ತಮ್ಮ ಪುತ್ರಿಯೊಂದಿಗೆ ಚೆನ್ನೈನ ಅಳ್ವಾರ್​ ಪೇಟ್​ ಮತಗಟ್ಟೆಯಲ್ಲಿ ಬೆಳಗ್ಗೆ 8 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಈ ಕುರಿತು ಶ್ರುತಿ ಹಾಸನ್‌ ಟ್ವೀಟ್‌ ಮಾಡಿದ್ದು, ಇಂದು ಮತದಾನ. ಮತ ಚಲಾಯಿಸಿ ಏಕೆಂದರೆ ನಿಮ್ಮ ಮತ ಮುಖ್ಯವಾದುದು ಎಂದು ಬರೆದುಕೊಂಡಿದ್ದಾರೆ.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಕೂಡ ಚೆನೈನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದು, ಮತ ಚಲಾಯಿಸಿದ ಬಳಿಕ ಜನರತ್ತ ಕೈಬೀಸಿ ನಡೆದರು.

ಇನ್ನೊಂದೆಡೆ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಕೂಡ ತೇನಂಪೇಟ್​ನ ಎಸ್‌ಐಇಟಿ ಕಾಲೇಜಿನಲ್ಲಿನ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಡಿಎಂಕೆ ಪ್ರಧಾನ ಕಾರ್ಯದರ್ಶಿ ಕೆ ಅನಬಳಗನ್​ ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದ ಮ್ಯಾಲಪೂರದ ಮತಕೇಂದ್ರದಲ್ಲಿ ಮತ ಚಲಾಯಿಸಿದರು. ವ್ಹೀಲ್‌ ಚೇರ್‌ನಲ್ಲಿ ಬಂದು ಮೂಗಿಗೆ ನಳಿಕೆಯನ್ನು ಹಾಕಿಸಿಕೊಂಡೇ ಮತದಾನ ಮಾಡಿದ್ದು ವಿಶೇಷವಾಗಿತ್ತು.

Comments are closed.