ಮಂಗಳೂರು : ದೇಶ ಸೇವೆ ಮಾಡಲು ಹಲವಾರು ರೀತಿಯ ದಾರಿಗಳಿವೆ ಎಂಬುವುದನ್ನು ಇಲ್ಲೊಬ್ಬ ಯುವಕ ವಿದೇಶದಲ್ಲಿ ತಾನಿದ್ದ ಉದ್ಯೋಗವನ್ನೇ ಬಿಟ್ಟು ಬರುವ ಮೂಲಕ ನಿರೂಪಿಸಿದ್ದಾರೆ.
ಭಾರತದಲ್ಲಿ ಎಷ್ಟೋ ಮಂದಿಗೆ ಮತ ಚಲಾಯಿಸುವುದೆಂದರನೇ ಬೇಸರದ ವಿಷಯ. ಇಂದಿಗೂ ಎಷೋ ಮಂದಿ ತಮ್ಮ ಮತದಾನದ ಹಕ್ಕಿನ ಬಗ್ಗೆ ತಿಳಿಯದೇ ಉಢಾಫೆ ಮಾತಾಡಿಕೊಂಡು ಮತ ಚಲಾಯಿಸದೇ ಇರುವವರು ಇದ್ದಾರೆ. ಇಲ್ಲೊಬ್ಬ ಆದರ್ಶ ಯುವಕ ದೇಶ ಸೇವೆ ಮಾಡಲು ಸಿಕ್ಕಿರುವ ಒಂದು ಚಿಕ್ಕ ಅವಕಾಶವನ್ನು ಮಿಸ್ ಮಾಡಿ ಕೊಳ್ಳಬಾರದೆಂಬ ಉದ್ದೇಶದಿಂದ ದೊಡ್ಡ ಕಂಪನಿಯಲ್ಲಿದ್ದ ತನ್ನ ನೌಕರಿಯನ್ನೇ ಬಿಟ್ಟು ಭಾರತಕ್ಕೆ ಬಂದಿದ್ದಾರೆ.
ಮೂಲತಹ ಸುರತ್ಕಲ್ ನಿವಾಸಿ ಎಂಬಿಎ ಪದವಿಧರ 41ರ ಹರೆಯದ ಸುಧೀಂದ್ರ ಹೆಬ್ಬಾರ್ ಅವರೇ ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಲು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಆಸ್ಟ್ರೇಲಿಯಾದಿಂದ ಮಂಗಳೂರಿಗೆ ವಾಪಸಾದ ಆದರ್ಶ ಯುವಕ.
ಸುಧೀಂದ್ರ ಹೆಬ್ಬಾರ್ ಅವರು ಕಳೆದ ಒಂದುವರೆ ವರ್ಷಗಳಿಂದ ಆಸ್ಟ್ರೇಲಿಯಾದ ಸಿಡ್ನಿ ಇಂಟರ್ನ್ಯಾಶನಲ್ ವಿಮಾನ ನಿಲ್ಧಾಣದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ಭಾರತದಲ್ಲಿ ಮತ ಚಲಾಯಿಸುವ ಉದ್ದೇಶದಿಂದ ಹಾಗೂ ಮಂಗಳೂರಿನಲ್ಲಿ ಎಪ್ರಿಲ್ 13ರಂದು ನಡೆದ ಚೌಕಿಧಾರ್ ಮೋದಿಯವರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತಾವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ರಜೆ ನೀಡುವಂತೆ ಅರ್ಜಿ ಸಲ್ಲಿಸಿದಾಗ, ಕಂಪನಿ ರಜೆ ನೀಡದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಯನ್ನೇ ತೊರೆದು ಭಾರತಕ್ಕೆ ಬಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಎಪ್ರಿಲ್ 13ರಂದು ನಡೆದ ಬಿಜೆಪಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಮೋದಿಗೆ ಮತ ಹಾಕುವುದು ಕೂಡ ದೇಶ ಸೇವೆ : ಸುಧೀಂದ್ರ ಹೆಬ್ಬಾರ್
(ಸುದೀಂದ್ರ ಹೆಬ್ಬಾರ್ ಅವರು ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅಯ್ದ ಭಾಗಗಳು ಇಲ್ಲಿವೆ)
ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಹಲವಾರು ಅಭಿವೃದ್ಧಿಕಾರ್ಯಗಳಾಗಿವೆ. ಭೃಷ್ಟಚಾರ ಕಡಿಮೆಯಾಗಿದೆ. ಬೇರೆ ಬೇರೆ ದೇಶಗಳಿಗೆ ಹೋದಾಗ ಭಾರತದ ಬಗ್ಗೆ ಅಲ್ಲಿಯವರಿಗೆ ಮೊದಲಿದ್ದ ಕೆಟ್ಟ ಅಭಿಪ್ರಾಯ ಈಗ ಇಲ್ಲ. ಈಗ ಭಾರತೀಯರಿಗೆ ವಿದೇಶಿಯರೂ ತುಂಬಾ ಗೌರವ ಕೊಡುತ್ತಾರೆ. ವಿದೇಶಗಳಲ್ಲಿ ನಮ್ಮ ಭಾರತದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈಗ ನಾವು ಭಾರತೀಯರು ಎಂದು ಹೇಳಲು ತುಂಬಾ ಹೆಮ್ಮೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಸನ್ಮಾನ್ಯ ನಮ್ಮ ಪ್ರಧಾನ ಮಂತ್ರಿ ಮೋದಿಯವರು. ಅವರ ಆಡಳಿತದಿಂದ ಈ ರೀತಿಯ ಬದಲಾವಣೆಗಳು ಸಾಧ್ಯವಾಗಿದೆ.
ಅದಕ್ಕೆ ಭಾರತದ ಪ್ರಧಾನಿಯಾಗಿ ಮೋದಿಯವರೇ ಮುಂದುವರಿಯ ಬೇಕು ಎಂಬ ಅಭಿಲಾಷೆಯಿಂದ ನನ್ನ ಮತದಾನದ ಹಕ್ಕನ್ನು ಓರ್ವ ಉತ್ತಮ ವ್ಯಕ್ತಿಗೆ ಚಲಾಯಿಸಬೇಕೆಂಬ ನಿಟ್ಟಿನಲ್ಲಿ ನಾನು ನನ್ನ ಸಂಸ್ಥೆಯಲ್ಲಿ ರಜೆ ಕೇಳಿದೆ. ಆದರೆ ಅವರು ರಜೆ ನೀಡಲು ನಿರಾಕರಿಸಿದರು. ಅದಕ್ಕೆ ನನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮೋದಿಯವರಿಗೆ ಓಟು ಮಾಡಲೇ ಬೇಕೆಂದು ಭಾರತಕ್ಕೆ ಬಂದೆ.
ಕೆಲಸ ಬೇಕಾದರೆ ಇನ್ನೊಂದು ಸಿಗುತ್ತದೆ. ಆದರೆ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುತದೆಯೇ..? , ಗಡಿಯಲ್ಲಿ ಸೈನಿಕರ ಜೊತೆ ನಿಂತು ಯುದ್ಧ ಮಾಡಲು ಸಾಧ್ಯವಿಲ್ಲ. ಬದಲಾಗಿ ಓರ್ವ ಉತ್ತಮ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ದೇಶಕ್ಕೆ ಸಣ್ಣ ಸೇವೆ ಸಲ್ಲಿಸಬೇಕೆಂಬ ಎಂಬ ಇಚ್ಚೆ ನನ್ನದು. ನಮ್ಮಂತವರಿಗೆ ಮತ ಚಲಾಯಿಸುವ ಮೂಲಕ ಮಾತ್ರ ದೇಶಾಭಿಮಾನ ತೋರಿಸಲು ಅವಕಾಶ ಸಿಗುವುದು. ದೇಶ ಸೇವೆಗೆ ಇದೇ ಉತ್ತಮ ಅಯ್ಕೆ ಎಂದು ಕೆಲಸಕ್ಕೆ ರಾಜಿನಾಮೆ ನೀಡಿ ಬಂದಿದ್ದೇನೆ.
ಇನ್ನು ಇಲ್ಲಿಯ ಫಲಿತಾಂಶ ಬಂದ ನಂತರ ಮೋದಿಯವರ ವಿಜಯೋತ್ಸವ ನೋಡಿಯೇ ಮತ್ತೆ ವಿದೇಶಕ್ಕೆ ತೆರಳಿ ಮತ್ತೆ ಕೆಲಸದ ಹುಡುಕಾಟ ಮುಂದುವರಿಸುತ್ತೇನೆ. ಕೆಲಸ ಹೋದರೆ ಇನ್ನೊಂದು ಸಿಗುತ್ತದೆ. ಯಾವೂದೇ ಸಮಸ್ಯೆ ಇಲ್ಲ. ಆದರೆ ದೇಶ ಮೊದಲು. ತಾಯಿನಾಡಿನ ಋಣ ನಮ್ಮ ಮೇಲಿದೆ. ಭಾರತೀಯರಿಗೆ ದೇಶವೇ ಮುಖ್ಯ _ ಸುಧೀಂದ್ರ ಹೆಬ್ಬಾರ್
_ಸತೀಶ್ ಕಾಪಿಕಾಡ್
ಮುಖ್ಯ ವರದಿಗಾರರು – kannadigaworld.com
ಮಂಗಳೂರು – ಕರಾವಳಿ.
ಮೊಬೈಲ್ ಸಂಖ್ಯೆ :9035089084