ರಾಷ್ಟ್ರೀಯ

ವಾಟ್ಸ್​​ಆ್ಯಪ್​ನಲ್ಲಿ ನೀವು ಬ್ಲಾಕ್​ ಆಗಿದ್ದರೆ ತಿಳಿಯುವುದು ಹೇಗೆ? ಅನ್​ಬ್ಲಾಕ್​ ಮಾಡೋದು ಹೇಗೆ?

Pinterest LinkedIn Tumblr


ವಿಶ್ವದ ಪ್ರಸಿದ್ಧ ಮೆಸೆಜಿಂಗ್​ ಆ್ಯಪ್​ಗಳಲ್ಲಿ ಒಂದಾದ ವಾಟ್ಸ್​ಆ್ಯಪ್​ ಇಂದು ಅನೇಕ ಜನರ ಮೊಬೈಲ್​ನಲ್ಲಿ ಬೀಡುಬಿಟ್ಟಿದೆ. ಇದಕ್ಕಾಗಿಯೆ ದಿನ ಕಳೆದಂತೆ ವಾಟ್ಸ್​​ಆ್ಯಪ್​ ಹೊಸಹೊಸ ಫೀಚರ್​​ನೊಂದಿಗೆ ಅಪ್ಡೇಟ್ ಆಗುತ್ತಿದೆ.

ವಾಟ್ಸ್​ಆ್ಯಪ್​ನಲ್ಲಿ ಕಿರಿಕಿರಿ ಮಾಡುವ ವ್ಯಕ್ತಿಗಳನ್ನು ಬ್ಲಾಕ್​ ಮಾಡಬಹುದಾದ ಆಯ್ಕೆ ನಿಮಗೆಲ್ಲ ತಿಳಿದಿರುತ್ತದೆ. ಆದರೆ, ಆ ಬ್ಲಾಕ್​ ಆದ ವ್ಯಕ್ತಿಗೆ ತನ್ನ ಅಕೌಂಟ್​ ಬ್ಲಾಕ್​ ಆಗಿದೆ ಎಂಬುದು ತಿಳಿದಿರುವುದಿಲ್ಲ. ಆದರೆ ನೀವು ಬ್ಲಾಕ್​ ಆಗಿದ್ದರೆ ಕೆಲವು ಇಂಡಿಕೇಷನ್​ ಮೂಲಕ ತಿಳಿದುಕೊಳ್ಳಲು ಸಾಧ್ಯ.

ನೀವು ಬ್ಲಾಕ್​ ಆಗಿದ್ದರೆ ತಿಳಿಯುವುದು ಹೇಗೆ?

ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್​ ಮಾಡಿರುವ ವ್ಯಕ್ತಿಯ ಪ್ರೊಪೈಲ್​ ಫೋಟೊ ಅಥವಾ ಸ್ಟೇಟಸ್​ ನಿಮಗೆ ಕಾಣುವುದಿಲ್ಲ

ಬ್ಲಾಕ್ ಮಾಡಿದ ವ್ಯಕ್ತಿಗೆ ವಾಟ್ಸ್​ ಆ್ಯಪ್​ನಿಂದ ಕರೆ ಮಾಡಲು ಸಾಧ್ಯವಾಗುವುದಿಲ್ಲ

ನೀವು ಕಳುಹಿಸಿದ ಸಂದೇಶ ಕೂಡ ಬ್ಲಾಕ್​ ಮಾಡಿದ ವ್ಯಕ್ತಿಗೆ ತಲುಪುವುದಿಲ್ಲ

ವಾಟ್ಸ್​ಆ್ಯಪ್​ ಅಕೌಂಟ್​ ಬ್ಲಾಕ್​ ಆಗಿದ್ದರೆ ಈ ಮೇಲಿನ ಇಂಡಿಕೇಷನ್​ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.

ಅನ್​ಬ್ಲಾಕ್​ ಮಾಡೋದು ಹೇಗೆ?

ವಾಟ್ಸ್​ಆ್ಯಪ್​ನ ಸೆಟ್ಟಿಂಗ್ಸ್​ಗೆ ತೆರಳಿ ಅಕೌಂಟ್​ ಆಯ್ಕೆಯನ್ನು ತೆರೆಯಿರಿ

ಡಿಲೀಟ್​ ಮೈ ಅಕೌಂಡ್​ನ್ನು ಆಯ್ಕೆ ಮಾಡಿಕೊಂಡು ವಾಟ್ಸ್​ಆ್ಯಪ್​ ಅನ್ನು ಅನ್​ಇನ್​ಸ್ಟಾಲ್​ ಮಾಡಿ

ನಂತರ ನಿಮ್ಮ ಫೋನ್ ಅನ್ನು ರೀಸ್ಟಾರ್ಟ್​ ಮಾಡಿ

ಗೂಗಲ್​ ಪ್ಲೇ ಸ್ಟೋರ್​ನಿಂದ ವಾಟ್ಸ್​ ಆ್ಯಪ್​ ಮತ್ತೆ ಇನ್​ಸ್ಟಾಲ್​​​​ ಮಾಡಿ

ಮೊಬೈಲ್​ ನಂಬರ್​ ನಮೂದಿಸಿದ ನಂತರ ಓಟಿಪಿ ಎಂಟರ್​ ಮಾಡಿ. ಆದರೆ ಈ ಸಂದರ್ಭ ಬ್ಯಾಕ್​ ಆಪ್​ಗಳನ್ನು ಮಾತ್ರ ರಿಸ್ಟೋರ್​ ಮಾಡಬೇಡಿ. ಹೀಗೆ ಇತ್ಯಾದಿ ಪ್ರೋಸಿಜರ್​ ಫಾಲೋ ಮಾಡಿ, ವಾಟ್ಸ್​ಆ್ಯಪ್​​ ಓಪನ್​ ಆದಾಗ ನಿಮ್ಮನ್ನ ಬ್ಲಾಕ್ ಮಾಡಿರುವವರ ಅಕೌಂಟ್​​​​ ಅನ್​ಬ್ಲಾಕ್ ಆಗಿರುತ್ತದೆ.

Comments are closed.