ಅಂತರಾಷ್ಟ್ರೀಯ

ಇದು ಅತ್ಯಂತ ದೊಡ್ಡದಾದ, ಅಪಾಯಕಾರಿ ಹಕ್ಕಿ!: ತಾನು ಸಾಕಿದ್ದ ಪಕ್ಷಿಯಿಂದಲೇ ಸಾವನ್ನಪ್ಪಿದ ಮಾಲೀಕ

Pinterest LinkedIn Tumblr


ಹಾಸ್ಟನ್​: ತನ್ನ ಫಾರ್ಮ್​ಹೌಸ್​ನಲ್ಲಿ ತಾನೇ ಸಾಕಿದ್ದ ಪಕ್ಷಿಯಿಂದ ಮಾಲೀಕನೇ ಸಾವನ್ನಪ್ಪಿದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

ಅಮೆರಿಕದ 75 ವರ್ಷದ ಮಾಲೀಕ ತನ್ನ ಫಾರ್ಮ್​ಹೌಸ್​ನಲ್ಲಿ ಸಾಕಿದ್ದ ಅಪಾಯಕಾರಿ ಪಕ್ಷಿಯಿಂದ ಸಾವನ್ನಪ್ಪಿರುವ ವಿಚಿತ್ರ ಘಟನೆ ನಡೆದಿದೆ. ಈ ಪಕ್ಷಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ಎಂದು ಪರಿಗಣಿಸಲಾಗುತ್ತದೆ.

ಮರ್ವಿನ್ ಹಜೋಸ್​ ಎಂಬ ವ್ಯಕ್ತಿಯೇ ಸಾವನ್ನಪ್ಪಿದವರು. ಕ್ಯಾಸೋವರಿ ಎಂಬ ಈ ಪಕ್ಷಿ ಅತ್ಯಂತ ದೊಡ್ಡದಾದ ಪಕ್ಷಿಯಾಗಿದ್ದು, ಅತ್ಯಂತ ಅಪರೂಪದ ತಳಿಯಾಗಿದೆ. ಈ ಹಕ್ಕಿ ಮರ್ವಿನ್ ಹಜೋಸ್​ ಮೇಲೆ ಅಟ್ಯಾಕ್​ ಮಾಡಿ ಕೆಳಗೆ ಬೀಳಿಸಿದೆ. ಮರ್ವಿನ್ ಹಜೋಸ್ ಫ್ಲೋರಿಡಾದ ತನ್ನ ಮನೆಯ ಪಕ್ಕದಲ್ಲೇ ಖಾಸಗಿ ಫಾರ್ಮ್ ಹೌಸ್ ನಿರ್ಮಾಣ ಮಾಡಿಕೊಂಡಿದ್ದರು. ಹತ್ತಾರು ವರ್ಷಗಳಿಂದ ಇಲ್ಲಿ ಅಪರೂಪದ ತಳಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕಿದ್ದರು. ಕ್ಯಾಸೋವರಿ ಎಂಬ ಅಪಾಯಕಾರಿ ಪಕ್ಷಿಯನ್ನೂ ಆತ ಸಾಕಿದ್ದ.

30 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ನಾಯಿ!

75 ವರ್ಷವಾಗಿದ್ದರಿಂದ ಹಜೋಸ್​ ದೇಹದಲ್ಲಿ ಶಕ್ತಿಯೂ ಕುಂದತೊಡಗಿತ್ತು. ಅವರು ತಮ್ಮ ಮನೆಯಲ್ಲಿ ಓಡಾಡುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದರು. ಆ ವೇಳೆ ಅಲ್ಲೇ ಪಕ್ಕದಲ್ಲಿದ್ದ ಕ್ಯಾಸೋವರಿ ಪಕ್ಷಿ ಹಜೋಸ್​ ಅವರನ್ನು ಏಳಲು ಬಿಡದೆ ಅವರ ಮೈಮೇಲೆ ಹತ್ತಿ ಕುತ್ತಿಗೆಯನ್ನು ಕಚ್ಚಿ ಸಾಯಿಸಿದೆ. ಪಕ್ಷಿಯ ದಾಳಿಯಿಂದ ಆಘಾತಗೊಂಡ ಹಜೋಸ್​ಗೆ ಕಿರುಚಾಡಲೂ ಸಾಧ್ಯವಾಗಿಲ್ಲ. ಹೀಗಾಗಿ, ಮನೆಯವರಾರಿಗೂ ಈ ಬಗ್ಗೆ ಗೊತ್ತಾಗಿಲ್ಲ. ಬಹಳ ಸಮಯದ ನಂತರ ಮನೆಯವರಿಗೆ ಹಜೋಸ್​ ಕೆಳಗೆ ಬಿದ್ದಿರುವುದು ಕಂಡಿದೆ. ಆದರೆ, ಅಷ್ಟರಲ್ಲಾಗಲೇ ಅವರ ಜೀವ ಹೋಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಕ್ಯಾಸೋವರಿ ಪಕ್ಷಿಯನ್ನು ವಶಕ್ಕೆ ಪಡೆದು ಪ್ರತ್ಯೇಕವಾಗಿ ಇರಿಸಿದ್ದಾರೆ. 72 ಕೆಜಿಗಿಂತಲೂ ಭಾರವಿರುವ ಈ ದೈತ್ಯ ಪಕ್ಷಿಗಳು ಅತ್ಯಂತ ಅಪಾಯಕಾರಿಯಾಗಿರುತ್ತವೆ.

Comments are closed.