ಕರಾವಳಿ

ಮರಹತ್ತಿ ಕುಳಿತ ನೂರಾರು ಅಭಿಮಾನಿಗಳನ್ನು ಮರದಿಂದ ಕೆಳಗಿಳಿಯುವಂತೆ ಮೋದಿ ಹೇಳಿದ್ದೇಕೆ?

Pinterest LinkedIn Tumblr

ಮಂಗಳೂರು, ಎಪ್ರಿಲ್ 13 : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಎರಡು ಲಕ್ಷಕ್ಕೂ ಮೀರಿ ನೆರೆದ ಸಾಗರೋಪಾದಿಯ ಜನಸಮೂಹವನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.

ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು ಬಳಿಕ ಹಿಂದಿಯಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಈ ವೇಳೆ ಕೇಂದ್ರ ಮೈದಾನದೊಳಗೆ ಜಾಗ ಸಾಕಾಗದೇ ಕೆಲವರು ರಸ್ತೆಯಲ್ಲಿ ನಿಂತು ಮತ್ತೆ ಕೆಲವರು ಹತ್ತಿರದ ಕಟ್ಟಡದಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಿದರೆ. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಮೈದಾನದ ಸುತ್ತಮುತ್ತಲಿನ ಮರಹತ್ತಿ ಬಾವಲಿಗಳಂತೆ ನೇತಾಡುತ್ತಾ ಕಾರ್ಯಕ್ರಮ ವೀಕ್ಷಿಸುತ್ತಿದ್ದರು.

ತಮ್ಮ ಭಾಷಣಕ್ಕೂ ಮುನ್ನ ಇದನ್ನು ಗಮನಿಸಿದ ಪ್ರಧಾನಿ ಮೋದಿಯವರು ಮರದಲ್ಲಿದ್ದವರನ್ನು ಇಳಿಯುವಂತೆ ಮನವಿ ಮಾಡಿದರು. ತಮ್ಮ ಅಭಿಮಾನಕ್ಕೆ ಮೆಚ್ಚುತ್ತೇನೆ. ಆದರೆ ಮರದಿಂದ ಬಿದ್ದು ನಿಮಗೇನಾದರೂ ಗಾಯವಾದರೆ ನನಗೆ ತುಂಬಾ ನೋವಾಗುತ್ತದೆ. ಅದುದ್ದರಿಂದ ತಾವೆಲ್ಲಾ ದಯವಿಟ್ಟು ಮರದಿಂದ ಇಳಿದು ನೆಲದಿಂದ ಕಾರ್ಯಕ್ರಮ ವೀಕ್ಷಣೆ ಮಾಡಿ ಎಂದು ಮೋದಿಯವರು ಮನವಿ ಮಾಡಿದರು.

ಆದರೆ ಮರದಲ್ಲಿದ್ದವರಿಗೆ ಎಷ್ಟು ಮಂದಿಗೆ ಹಿಂದಿ ಅರ್ಥವಾಯಿತಾ ಇಲ್ಲವಾ ಗೊತ್ತಿಲ್ಲ. ಮೋದಿ ಭಾಷಣ ಕೇಳಲು ಮರ ಹತ್ತಿ ಕುಳಿತ್ತಿದ್ದ ಇವರಲ್ಲಿ ಮರದಿಂದ ಮಾತ್ರ ಯಾರೂ ಇಳಿಯುವ ಪ್ರಯತ್ನವನ್ನೇ ಮಾಡಲಿಲ್ಲ. ಮರದಿಂದಲೇ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿರುವುದು ಮಾತ್ರ ಕೇಳುತ್ತಿತ್ತು. ಪೊಲೀಸರು ಕೂಡ ಇವರನ್ನು ಮರದಿಂದ ಇಳಿಯುವಂತೆ ಮನವಿ ಮಾಡಿದರೂ ಇವರಿ ಮಾತ್ರ ಮೋದಿ ಕಾರ್ಯಕ್ರಮ ಮುಗಿಯುವವರೆಗೂ ಮರದಿಂದ ಇಳಿಯಲೇ ಇಲ್ಲ.

ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್

Comments are closed.