ಕರಾವಳಿ

ಕಾಂಗ್ರೆಸ್‌ – ಜೆಡಿಎಸ್‌ಗೆ ಪರಿವಾರವಾದವೇ ಮುಖ್ಯ, ಆದರೆ ಬಿಜೆಪಿಗೆ ರಾಷ್ಟ್ರವಾದವೇ ಮುಖ್ಯ ; ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (70ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿ)

Pinterest LinkedIn Tumblr

ಮಂಗಳೂರು, ಎಪ್ರಿಲ್ 13 : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಎರಡು ಲಕ್ಷಕ್ಕೂ ಮೀರಿ ನೆರೆದ ಸಾಗರೋಪಾದಿಯ ಜನಸಮೂಹವನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.

ನವ ಭಾರತ ನಿರ್ಮಾಣ ಬಿಜೆಪಿ ಕನಸು. ಲೋಕಸಭಾ ಚುನಾವಣೆ ಎಂದರೆ ಪ್ರಧಾನಿ ಅಥವಾ ಒಂದು ಸರಕಾರವನ್ನು ಚುನಾಯಿಸುವುದು ಎಂದರ್ಥವಲ್ಲ. ಲೋಕಸಭಾ ಚುನಾವಣೆ ಎಂದರೆ 21ನೇ ಶತಮಾನದಲ್ಲಿ ನವ ಭಾರತ ಹೇಗಿರಬೇಕು ಎಂಬುದನ್ನು ತೀರ್ಮಾನಿಸುವುದು. ಈ ಅವಕಾಶ ಕಾಂಗ್ರೆಸ್‌ ಪಕ್ಷಕ್ಕೆ ದೇಶ 20ನೇ ಶತಮಾನದಲ್ಲೇ ಸಿಕ್ಕಿತ್ತು. ಆದರೆ ಸಿಕ್ಕಿದ ಅವಕಾಶವನ್ನು ಅಂದಿನ ಕಾಂಗ್ರೆಸ್ ಪಕ್ಷವು ಒಂದು ಕುಟುಂಬದ ಕೈಗೆ ಒಪ್ಪಿಸುವ ಮೂಲಕ ಅವಕಾಶವನ್ನು ಕಳೆದುಕೊಂಡಿತು ಎಂದು ಮೋದಿ ಹೇಳಿದರು.

ಬಿಜೆಪಿಗೆ ರಾಷ್ಟ್ರವಾದವೇ ಮುಖ್ಯವಾಗಿದೆ.ಆದರೆ ರಾಜ್ಯದಲ್ಲಿನ ಕಾಂಗ್ರೆಸ್‌ – ಜೆಡಿಎಸ್‌ ಎರಡೂ ಪಕ್ಷಗಳಿಗೆ ಪರಿವಾರವಾದವೇ ಮುಖ್ಯವಾಗಿದೆ. ರಾಜ್ಯದಲ್ಲಿನ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರಕಾರ ರೈತರ ಶತ್ರುವಾಗಿದೆ; ಕೇಂದ್ರದ ಯೋಜನೆ ಪ್ರಕಾರ ರೈತರ ಖಾತೆಗೆ ವರ್ಷಕ್ಕೆ 6,000 ರೂ. ಜಮೆ ಮಾಡುವ ಸಲುವಾಗಿ ಫ‌ಲಾನುಭವಿಗಳ ಪಟ್ಟಿಯನ್ನು ಕೊಡುವಲ್ಲಿ ಅದು ವಿಫ‌ಲವಾಗಿದೆ’ ಎಂದು ಮೋದಿ ಹೇಳಿದರು.

ಹೆಚ್ಚಿನ ವಿವರ ನಿರೀಕ್ಷಿಸಿ..

_Sathish Kapikad (Mobail No: 9035089084)

Comments are closed.