ಕರಾವಳಿ

ಹಳೇ ಬಂದರು ಪ್ರದೇಶದಲ್ಲಿ ಮಿಥುನ್ ರೈ ಪರ ಲೋಬೋ, ಹರೀಶ್ ಕುಮಾರ್ ಜಂಟಿಪ್ರಚಾರ

Pinterest LinkedIn Tumblr

ಮಂಗಳೂರು : ಹಳೇ ಬಂದರು ಪ್ರದೇಶದಲ್ಲಿ‌ ಮಂಗಳೂರು ದಕ್ಷಿಣ ವಿಧಾನಸಭಾ ಮಾಜಿ ಶಾಸಕರಾದ  ಜೆ.ಆರ್.ಲೋಬೋ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್‌ರವರು ಜಂಟಿಯಾಗಿ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ‌ ಅಭ್ಯರ್ಥಿ ಮಿಥುನ್‌ರೈ‌ ಪರವಾಗಿ ಪ್ರಚಾರನಡೆಸಿದರು.

ಈ ಸಂದರ್ಭದಲ್ಲಿ ಹಳೇ ಬಂದರು ನೌಕರರ ಶ್ರಮಿಕ ಸಂಘದ ಸದಸ್ಯರಲ್ಲಿಕಾಂಗ್ರೆಸ್ ಪಕ್ಷದ‌ಅಭ್ಯರ್ಥಿಯನ್ನುಗೆಲ್ಲಿಸಬೇಕೆಂದು ಮನವಿ ಮಾಡಿದರು.

ಹಳೇ ಬಂದರಿನ‌ಅಭಿವೃದ್ದಿ, ಇ.ಎಸ್.ಐ‌ಆಸ್ಪತ್ರೆಯ‌ಉನ್ನತೀಕರಣ ,ಶ್ರಮಿಕ ಸಂಘದ ಶ್ರೇಯೋಭಿವೃದ್ದಿಗೋಸ್ಕರ ಹಾಗೂ ಬಂದರಿನ ಸಮಸ್ಯೆಗಳ ಪರಿಹಾರಕ್ಕೋಸ್ಕರಕಾಂಗ್ರೆಸ್‌ಅಭ್ಯರ್ಥಿ ಮಿಥುನ್ ಎಂ ರೈಯವರು ಶ್ರಮಿಸಲು ಸದಾ ಸಿದ್ದರಾಗಿದ್ದಾರೆ ಎಂದು  ಜೆ.ಆರ್.ಲೋಬೋ ಹಾಗೂ ಶ್ರೀ.ಹರೀಶ್ ಕುಮಾರ್ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರಮಿಕ ಸಂಘದ ಮುಖಂಡ ಶ್ರೀ ಇಂತಿಯಾಜ್ , ಮಾಜಿಕಾರ್ಪೋರೇಟರ್‌ಅಬ್ದುಲ್ ಲತೀಫ್ ಮತ್ತಿತರರು‌ಉಪಸ್ಥಿತರಿದ್ದರು.

Comments are closed.