ಮಂಗಳೂರು : ಯುವ ಮತದಾರರು, ವಿದ್ಯಾರ್ಥಿಗಳು ನರೇಂದ್ರ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಲು ಬಯಸುತ್ತಾರೆ. ಈ ಬಾರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗುವುದು ನಿಶ್ಚಿತ. 2020ರಲ್ಲಿ ಭಾರತ ವಿಶ್ವ ಗುರುವಾಗಿ ಎದ್ದು ನಿಲ್ಲುತ್ತದೆ ಎಂಬ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಭವಿಷ್ಯವನ್ನು 2019ರಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ನೂರುಕ್ಕೆ ನೂರು ಸಕಾರಗೊಳಿಸುತ್ತಾರೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಬಿಜೆಪಿ ಮುಖಂಡ ರಾಜಗೋಪಾಲ್ ರೈ ಅವರ ನೇತ್ರತ್ವದಲ್ಲಿ ರವಿವಾರ ಮಂಗಳೂರಿನ ಉರ್ವಾಸ್ಟೋರ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬಿಜೆಪಿ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಚುನಾವಣಾ ಪ್ರಚಾರಸಭೆಯನ್ನುದ್ದೇಶಿಸಿ ಮಾತನಾಡಿದರು. ಸತತ ಎರಡು ಬಾರಿ ನನ್ನನ್ನು ಆಯ್ಕೆ ಮಾಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ನೀಡಿದಿರಿ. ಅದೇ ರೀತಿ ಈ ಬಾರಿಯೂ ಕೇಂದ್ರದಲ್ಲಿ ನರೇಂದ್ರ ಮೋದಿ ಯವರ ಸರ್ಕಾರ ರಚನೆಯಾಗಬೇಕಾಗಿದೆ , ದೇಶದ ರಕ್ಷಣೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕಮಲದ ಚಿನ್ನೆಗೆ ಮತ ಹಾಕಿ ಬಿಜೆಪಿ ಅಭ್ಯರ್ಥಿಗಳನ್ನು ಚುನಾಯಿಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಅವರು ಸಭೆಯಲ್ಲಿ ವಿನಂತಿ ಮಾಡಿದರು.
ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಪಕ್ಷದ ಜಿಲ್ಲಾ ನಾಯಕ ಹರಿಕೃಷ್ಣ ಬಂಟ್ವಾಳ್ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಮನಪಾ (ಹಿರಿಯ) ಸದಸ್ಯೆ ರಾಮೇಶ್ವರಿ ಅಶೋಕನಗರ, ಪಕ್ಷದ ಪ್ರಮುಖರಾದ ನಿತಿನ್ ಕುಮಾರ್,ರವಿಶಂಕರ್ ಮಿಜಾರ್, ಜಿತೇಂದ್ರ ಕೊಟ್ಟಾರಿ, ಪ್ರೇಮಾನಂದ ಶೆಟ್ಟಿ, ಭಾಸ್ಕರ್ ಚಂದ್ರ ಶೆಟ್ಟಿ, ಸಂಜಯ್ ಪ್ರಭು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ರೂವಾರಿ ಬಿಜೆಪಿ ಮುಖಂಡ ರಾಜ್‌ಗೋಪಾಲ್ ರೈ ಸ್ವಾಗತಿಸಿದರು. ಜಗದೀಶ್ ಶೆಟ್ಟಿ ವಂದೇ ಮಾತರಂ ಹಾಡಿದರು. ಸಚಿನ್ ರಾಜ್ ರೈ ವಂದಿಸಿದರು.
Comments are closed.