ರಾಷ್ಟ್ರೀಯ

ಬಿಎಸ್ಎನ್ಎಲ್ ನ 2018-19 ನೇ ಸಾಲಿನ ನಷ್ಟದ ಮೊತ್ತ 12,000 ಕೋಟಿ ರೂಪಾಯಿ !

Pinterest LinkedIn Tumblr

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ನ 2018-19 ನೇ ಸಾಲಿನ ನಷ್ಟದ ಮೊತ್ತ 12,000 ಕೋಟಿ ರೂಪಾಯಿ ದಾಟಿರುವ ಸಾಧ್ಯತೆ ಇದೆ.

ಸಂಸ್ಥೆಗೆ ಸರ್ಕಾರದ ಇತರ ಯೋಜನೆಗಳಿಂದ ಬರುತ್ತಿರುವ ಆದಾಯವನ್ನೂ ಸೇರಿಸಿದರೆ ನಷ್ಟ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತೋರುತ್ತದೆ ಎಂಬುದು ಇತ್ತೀಚಿನ ಆಡಳಿತ ಮಂಡಳಿ ಸಭೆಯ ಅಭಿಪ್ರಾಯ. ಆದರೆ ಬಿಎಸ್ಎನ್ಎಲ್ ನೀಡುತ್ತಿರುವ ಸೇನೆಗಳಿಂದ ಬರುವ ಆದಾಯವನ್ನು ಪರಿಗಣಿಸಿದರೆ ಈ ವರ್ಷದ ನಷ್ಟ 12,000 ಕೋಟಿಯಷ್ಟಾಗಿದೆ.

ಕಳೆದ ವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಿಎಸ್ಎನ್ಎಲ್ ನ ಮಾನವ ಸಂಪನ್ಮೂಲ ವಿಷಯಗಳ ಬಗ್ಗೆ ಚರ್ಚೆ ನಡೆದಿತ್ತು. ಏ.16 ರಂದು ಮತ್ತೊಂದು ಸಭೆ ನಡೆಯಲಿದ್ದು ಇತರ ಹೂಡಿಕೆ ಯೋಜನೆಗಳ ಜೊತೆಗೆ ಈಗಿನ ಟ್ರೆಂಡ್ ಬಗ್ಗೆಯೂ ಚರ್ಚಿಸಲಿದೆ.

ಫೆಬ್ರವರಿ ತಿಂಗಳ ಬಳಿಕ ಬಿಎಸ್ಎನ್ಎಲ್ ಗೆ ಆರ್ಥಿಕ ಸಂಕಷ್ಟ ತೀವ್ರವಾಗಿ ಕಾಡಲು ಪ್ರಾರಂಭವಾಗಿದ್ದು, ನಷ್ಟದ ಪ್ರಮಾಣ ಶೇ.50 ರಷ್ಟು ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸತತ 13 ವರ್ಷಗಳಿಂದ ಬಿಎಸ್ಎನ್ಎಲ್ ನಷ್ಟದಲ್ಲಿದೆ. ಆದರೆ ಸರ್ಕಾರಿ ಸ್ವಾಮ್ಯದ ಸಂಸ್ಥೆ ನಷ್ಟದ ಮೊತ್ತವನ್ನು ಪ್ರಕಟಿಸಿಲ್ಲ. ಆದರೆ ಸಂಸತ್ ನಲ್ಲಿ ಟೆಲಿಕಾಂ ಸಚಿವರು ಬಹಿರಂಗಪಡಿಸಿದ ಮಾಹಿತಿಯ ಆಧಾರದಲ್ಲಿ ನಷ್ಟದ ಮೊತ್ತ ತಿಳಿದುಬಂದಿದೆ.

ಫೆಬ್ರವರಿ ತಿಂಗಳಲ್ಲಿ ಬಿಎಸ್ಎನ್ಎಲ್ ಎದುರಿಸಿದ್ದ ವೇತನ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಹಲವು ರೀತಿಯ ವಿಶ್ಲೇಷಣೆಗಳನ್ನು ಮಾಡಲಾಗಿತ್ತು. ಕೋಟಕ್ ಈಕ್ವೆಟೀಯ ವಿಶ್ಲೇಷಣೆಯ ಪ್ರಕಾರ ಬಿಎಸ್ಎನ್ಎಲ್ ನ ಒಟ್ಟಾರೆ ನಷ್ಟದ ಮೊತ್ತ 90,000 ಕೋಟಿ ದಾಟಿರುವ ಸಾಧ್ಯತೆ ಇದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನಷ್ಟ ಸರಿದೂಗಿಸುವುದರ ಜೊತೆಗೆ ಸಾಲ ಮರುಪಾವತಿ ಹೊಣೆಗಾರಿಕೆಯೂ ಇದ್ದು, 15,000 ಕೋಟಿ ರೂಪಾಯಿ ಸಾಲ ಹೊಂದಿದೆ.

Comments are closed.