ಮುಂಬಯಿ, ಎಪ್ರಿಲ್.07: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-20121ರ ಸಾಲಿನ ಪದಾಧಿಕಾರಿಗಳ ಆಯ್ಕೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‌ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ (ವಿಜಯ ಕರ್ನಾಟಕ), ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಅಶೋಕ್ ಎಸ್.ಸುವರ್ಣ (ಮೊಗವೀರ) ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು.
ಉಪಾಧ್ಯಕ್ಷ ರಂಗ ಎಸ್.ಪೂಜಾರಿ, (ಚಿಗುರು ಚಂದನ), ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ (ಕರ್ನಾಟಕ ಮಲ್ಲ), ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ (ಉದಯವಾಣಿ), ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ (ಯಶಸ್ವಿ ವ್ಯಕ್ತಿ), ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ (ಸಾಫಲ್ಯ), ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಆಗಿ ಡಾ| ಶಿವ ಮೂಡಿಗೆರೆ (ಮುಂಬಯಿ ನ್ಯೂಸ್) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ| ದಿನೇಶ್ ಶೆಟ್ಟಿ ರೆಂಜಾಳ (ಉದಯವಾಣಿ), ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ (ಕರ್ನಾಟಕ ಮಲ್ಲ), ನಾಗರಾಜ್ ಕೆ.ದೇವಾಡಿಗ (ಉದಯವಾಣಿ), ಅನಿತಾ ಪಿ.ಪೂಜಾರಿ ತಾಕೋಡೆ (ಟೈಂಮ್ಸ್ ಆಫ್ ಬೆದ್ರ), ಅಶೋಕ್ ಆರ್.ದೇವಾಡಿಗ (ಕರ್ನಾಟಕ ಮಲ್ಲ), ಪ್ರೀತಂ ಎನ್.ದೇವಾಡಿಗ (ನಮ್ಮ ಟಿವಿ), ಜಯಂತ್ ಕೆ. ಸುವರ್ಣ (ಪಿಂಗಾರ) ಸರ್ವಾನುಮತದಿಂದ ಆಯ್ಕೆಯಾದರು.
ಸಲಹಾ ಸಮಿತಿ ಸದಸ್ಯರಾಗಿ ಸಿಎ| ಐ.ಆರ್ ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಆರ್.ಕೆ ಶೆಟ್ಟಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ಡಾ| ಸುನೀತಾ ಎಂ.ಶೆಟ್ಟಿ, ಡಾ| ಸುರೇಶ್ ಎಸ್.ರಾವ್ ಕಟೀಲು, ಗ್ರೇಗೋರಿ ಡಿಅಲ್ಮೇಡಾ, ಪಂಡಿತ್ ನವೀನ್‌ಚಂದ್ರ ಆರ್.ಸನೀಲ್, ಸುರೇಂದ್ರ ಎ.ಪೂಜಾರಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಸುಧಾಕರ್ ಉಚ್ಚಿಲ್, ಹಾಗೂ ವಿಶೇಷ ಆಮಂತ್ರಿತ ಸದಸ್ಯರುಗಳಾಗಿ ನ್ಯಾ| ವಸಂತ್ ಎಸ್.ಕಲಕೋಟಿ, ಸಾ.ದಯಾ (ದಯಾನಂದ್ ಸಾಲ್ಯಾನ್), ಗೋಪಾಲ್ ತ್ರಾಸಿ, ಕುಸುಮಾ ಸಿ.ಪೂಜಾರಿ, ಕರುಣಾಕರ್ ವಿ.ಶೆಟ್ಟಿ ಇವರನ್ನು ಸಭೆಯು ಐಕ್ಯಮತದಿಂದ ಆಯ್ಕೆ ಗೊಳಿಸಿತು.
ಸಂಘದ ಸಲಹಾಗಾರರಾಗಿದ್ದು ಮುಖ್ಯ ಚುನಾವಣಾಧಿಕಾರಿ ನ್ಯಾ| ಪ್ರಕಾಶ್ ಎಲ್.ಶೆಟ್ಟಿ ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಆಗಿ ಅನನ್ಯ ಮತ್ತು ಧರ್ಮರ್ಥ ಸೇವೆಗೈಯುತ್ತಿರುವ ಸಿಎ| ಐ.ಆರ್ ಶೆಟ್ಟಿ ಅವರ ಸೇವೆಯನ್ನು ನೂತನ ಸಮಿತಿಯು ಸ್ಮರಿಸಿ ಅಭಿವಂದಿಸಿತು. ಇದೇ ಸಂದರ್ಭದಲ್ಲಿ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು ಪತ್ರಕರ್ತ ಸದಸ್ಯರ ಆರೋಗ್ಯನಿಧಿಗಾಗಿ 50,000/- ರೂಪಾಯಿ ದೇಣಿಗೆಯನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭಾರೈಸಿದರು.
ರಂಗ ಎಸ್.ಪೂಜಾರಿ
ಅಶೋಕ್ ಎಸ್.ಸುವರ್ಣ
ನಾಗೇಶ್ ಪೂಜಾರಿ ಏಳಿಂಜೆ
ರವೀಂದ್ರ ಶೆಟ್ಟಿ ತಾಳಿಪಾಡಿ
ಜಯರಾಮ ಎನ್.ಶೆಟ್ಟಿ
ಡಾ| ಜಿ.ಪಿ ಕುಸುಮಾ
ಡಾ| ಶಿವ ಮೂಡಿಗೆರೆ
ರೋನ್ಸ್ ಬಂಟ್ವಾಳ್ ಪ್ರಸ್ತಾವನೆಗೈದ ಸಂಘದ ಯಶಸ್ಸಿಗೆ ಹಾಗೂ ಪದಾಧಿಕಾರಿಗಳ ಆಯ್ಕೆಗೆ ವಿಶೇಷವಾಗಿ ಸಹಕರಿಸಿದ ಸರ್ವ ಗಣ್ಯರನ್ನು, ಎಲ್ಲಾ ಮತದಾರ ಸದಸ್ಯರನ್ನು ಸ್ಮರಿಸಿದರು ಹಾಗೂ ವಿಶೇಷವಾಗಿ ಸದಾನಂದ ಸಾಫಲ್ಯ (ರಾಜಯೋಗ್) ಮತ್ತು ಉಪಸ್ಥಿತ ಗಣ್ಯರಿಗೆ ಪುಷ್ಫಗುಪ್ಚವನ್ನಿತ್ತು ಗೌರವಿಸಿದರು.
ಗತ ಸಾಲಿನಲ್ಲಿ ಅಗಲಿದ ಎಲ್ಲಾ ಹಿರಿಕಿರಿಯ ಪತ್ರಕರ್ತರು, ಹಾಗೂ ರಾಷ್ಟ್ರದ ಯೋಧರನ್ನು ಸಭೆಯ ಆದಿಯಲ್ಲಿ ಸ್ಮರಿಸಿ ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಶೋಕ್ ಎಸ್.ಸುವರ್ಣ ಸ್ವಾಗತಿಸಿದರು. ಸಾ.ದಯಾ ಚುನಾವಣಾ ಫಲಿತಾಂಶ ಸಭೆ ಮುಂದಿಟ್ಟರು. ಡಾ| ಶಿವ ಮೂಡಿಗೆರೆ ಅಭಾರ ಮನ್ನಿಸಿದರು.
ಕಳೆದ ಮಾ.23ರಂದು ಸಮಿತಿಗೆ 15 ಸದಸ್ಯರ ಆಯ್ಕೆಯು ಚುನಾವಣೆ ಮೂಲಕ ನಡೆಸಲ್ಪಟಿದ್ದು, ಸಂಘದ ಸಂಸ್ಥಾಪಕರಾಗಿದ್ದು ದಶಕದಿಂದ ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಸೇವಾ ನಿರತ ರೋನ್ಸ್ ಬಂಟ್ವಾಳ್ ಸಾರಥ್ಯದ ಬಳಗವು ಭಾರೀ ಮತಗಳನ್ನು ಪಡೆದು ಜಯಭೇರಿ ಸಾಧಿಸಿತ್ತು.
Comments are closed.