ರಾಷ್ಟ್ರೀಯ

ಪಾಟ್ನಾ ಸಾಹಿಬ್ ನಿಂದ ರೆಬೆಲ್ ಸ್ಟಾರ್ ಶತೃಘ್ನ ಸಿನ್ಹಾ ಸ್ಪರ್ಧೆ !

Pinterest LinkedIn Tumblr

ನವದೆಹಲಿ: ಬಿಜೆಪಿ ಪೈರ್ ಬ್ರಾಂಡ್ ನಟ ಶತೃಘ್ನ ಸಿನ್ಹಾ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ನೂತನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಹಿಂದೆ ಬಿಜೆಪಿ ಪಕ್ಷದಿಂದ ಸಿನ್ಹಾ ಪ್ರತಿನಿಧಿಸುತ್ತಿದ್ದ ಪಾಟ್ನಾ ಸಾಹಿಬ್ ಕ್ಷೇತ್ರದಿಂದಲೇ ಅವರನ್ನು ಕಣಕ್ಕಿಳಿಸಿದೆ.

ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಸಮ್ಮುಖದಲ್ಲಿ ಶತ್ರುಘ್ನ ಸಿನ್ಹ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಪಕ್ಷ ಸೇರಿದ ಕೆಲ ಗಂಟೆಗಳಲ್ಲೇ ಕಾಂಗ್ರೆಸ್ ಫೈರ್ ಬ್ರಾಂಡ್, ಮತ್ತು ರೆಬೆಲ್ ಸ್ಟಾರ್ ನಟ ಶತ್ರುಘ್ನ ಸಿನ್ಹಾರನ್ನುಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸ್ಪರ್ಧಿಸುತ್ತಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಹಿಮಾಚಲ ಪ್ರದೇಶದ ಹಮೀರ್ ಪುರ ಲೋಕಸಭಾ ಕ್ಷೇತ್ರದಿಂದ ರಾಮ್ ಲಾಲ್ ಠಾಕುರ್ ಅವರಿಗೆ ಟಿಕೆಟ್ ನೀಡಲಾಗಿದೆ. ಅಂತೆಯೇ ಪಂಜಾಬ್ ನ ಮೂರು ಲೋಕಸಭಾ ಕ್ಷೇತ್ರಗಳಾದ ಖಡೂರ್ ಸಾಹಿಬ್ ಕ್ಷೇತ್ರದಿಂದ ಜಸ್ ಬೀರ್ ಸಿಂಗ್ ಗಿಲ್, ಫತೇಹ್ ಗಡ್ ಸಾಹಿಬ್ ಕ್ಷೇತ್ರದಿಂದ ಡಾ. ಅಮರ್ ಸಿಂಗ್ ಹಾಗೂ ಫರೀದ್ ಕೋಟ್ ಕ್ಷೇತ್ರದಿಂದ ಮೊಹಮದ್ ಸಾದಿಕ್ ರನ್ನು ಕಣಕ್ಕಿಳಿಸಲಾಗಿದೆ.

Comments are closed.