ಗಲ್ಫ್

ದುಬೈ; ‘ನವಭಾರತ’ ನಿರ್ಮಾಣಕ್ಕಾಗಿ ಡಾ.ಬಿ.ಆರ್.ಶೆಟ್ಟಿ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆದ ‘ಅನಿವಾಸಿ ಭಾರತೀಯರ ವಿಶ್ವ ವಾಣಿಜ್ಯ ಶೃಂಗಸಭೆ’

Pinterest LinkedIn Tumblr

Photo: Ashok Belman

ದುಬೈ: ಯುಎಇಯ ಹಿರಿಯ ಹೆಸರಾಂತ ಉದ್ಯಮಿ, ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್.ಶೆಟ್ಟಿ ಅವರ ಘನ ಸಾರಥ್ಯದಲ್ಲಿ ದುಬೈಯ ಸ್ಪೋರ್ಟ್ಸ್ ಸಿಟಿಯ ‘ದಿ ಡೋಮ್’ನಲ್ಲಿ ‘ಅನಿವಾಸಿ ಭಾರತೀಯರ ವಿಶ್ವ ವಾಣಿಜ್ಯ ಶೃಂಗಸಭೆ’ಯನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.

ಶುಕ್ರವಾರ ಸಂಜೆಯಿಂದ ಆರಂಭವಾದ ‘ಅನಿವಾಸಿ ಭಾರತೀಯರ ವಿಶ್ವ ವಾಣಿಜ್ಯ ಶೃಂಗಸಭೆ’ಯು ರಾತ್ರಿವರೆಗೆ ನಡೆದಿದ್ದು, ಸಾವಿರಾರು ಅನಿವಾಸಿ ಭಾರತೀಯರು ಭಾಗವಹಿಸುವ ಮೂಲಕ ‘ನವ ಭಾರತ ನಿರ್ಮಾಣದ’ ಸಂಕಲ್ಪವನ್ನು ಸಧೃಡಗೊಳಿಸಿದರು.

ಸಭೆಯ ಆರಂಭದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಡಾ.ಬಿ.ಆರ್.ಶೆಟ್ಟಿ, ನವಭಾರತ ನಿರ್ಮಾಣಕ್ಕೆ ಅನಿವಾಸಿ ಭಾರತೀಯರ ಕೊಡುಗೆ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು. ಭಾರತದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿರುವ ಭಾರತ ಕಂಡ ಅತ್ಯಂತ ಪ್ರಭಾವಿ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಬೆನ್ನಿಗೆ ನಾವೆಲ್ಲರೂ ನಿಲ್ಲಬೇಕಾಗಿದೆ ಎಂದರು.

ಮೋದಿ ಭಾರತದ ಪ್ರಧಾನಿಯಾದ ನಂತರ ವಿಶ್ವದ ಮೊಲೆಮೂಲೆಯಲ್ಲಿರುವ ಭಾರತೀಯರಿಗೆ ಇತರರು ಗೌರವ ನೀಡುವಂತೆ ಮಾಡಿದ್ದಾರೆ. ದೇಶದ ಚುಕ್ಕಾಣಿ ಹಿಡಿದ್ದ ಮೇಲೆ ಮೋದಿ ಎರಡು ಬಾರಿ ಯುಎಇಗೆ ಆಗಮಿಸಿದ್ದಾರೆ. ಅವರಿಂದ ಯುಎಇ ಹಾಗು ಭಾರತದ ಮಧ್ಯೆಗಿನ ಸೌಹಾರ್ದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ ಎಂದರು.

ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಝಾಯೆದ್‌ ಪದಕ ಘೋಷಿಸಿರುವುದು ತುಂಬ ಸಂತೋಷ ತಂದಿದೆ. ಯುಎಇ ಹಾಗು ಭಾರತದ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದ ಬಿ.ಆರ್.ಶೆಟ್ಟಿ, ಪ್ರಶಸ್ತಿ ಘೋಷಿಸಿರುವ ಯುಎಇಯ ಶೇಖ್‌ ಖಲೀಫಾ ಬಿನ್‌ ಝಾಯೆದ್‌ ಅಲ್‌ ನಹ್ಯಾನ್‌ ಅವರಿಗೂ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಲಂಡನ್ನಿನ ಉದ್ಯಮಿ ಶ್ರೀಮತಿ ಲೀನಾ ಬೇಕರ್ ಮಾತನಾಡಿ, ಮೋದಿ ಪ್ರಧಾನಿ ಆದ ಮೇಲೆ ಬೇರೆ ದೇಶಗಳೊಂದಿಗಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಇದರಿಂದ ಅನಿವಾಸಿ ಭಾರತೀಯರ ಸ್ಥಿತಿಗತಿ ಬದಲಾವಣೆಯಾಗಿದೆ. ಯುಎಈಯೊಂದಿಗಿನ ಸ್ನೇಹತ್ವ ಸದೃಢಗೊಳಿಸಿರುವ ಮೋದಿಯವರ ನಡೆ ಮೆಚ್ಚಲೇಬೇಕು. ಮೋದಿ ದೇಶ ಕಂಡ ಮಹಾನ್ ನಾಯಕ ಎಂದು ಗುಣಗಾನ ಮಾಡಿದರು.

ಮೋದಿ ಪ್ರಧಾನಿಯಾದ ಮೇಲೆ ಭಾರತದ ಮೇಲಿನ ದೇಶಭಕ್ತಿ ಹೆಚ್ಚಾಗಿದೆ. ಜೊತೆಗೆ ದೇಶ ಭಕ್ತಿಯನ್ನು ಸಾರುವ ಸಿನೆಮಾಗಳು ಕೂಡ ತೆರೆಕಾಣುತ್ತಿದೆ. ಇದೆಲ್ಲದಕ್ಕೂ ಮೋದಿಯೇ ಪ್ರೇರಣೆ ಎಂದು ವಿವೇಕ್ ಅಗ್ನಿಹೋತ್ರಿ ಸಂತಸ ವ್ಯಕ್ತಪಡಿಸಿದರು.

‘ಅನಿವಾಸಿ ಭಾರತೀಯರ ವಿಶ್ವ ವಾಣಿಜ್ಯ ಶೃಂಗಸಭೆ’ಯಲ್ಲಿ ಭಾಗವಹಿಸಿದ್ದ ಅತಿಥಿಗಳಾದ ಸ್ವಾಮಿ ಪರಮಾತ್ಮಾನಂದ, ಸಧ್ಗುರು ಬ್ರಹ್ಮಶಾನಂದ್, ಕ್ಯಾಪ್ಟನ್ ರಿಜ್ವಿ, ನೌಫ್ ಮರ್ವಾಯಿ, ಅಶೋಕ್ ಪಂಡಿತ್, ಡಾ.ರೂಪ ಮೂರ್ತಿ, ಸುಬ್ರಸ್ಥಾ, ಸವಿಯೋ ರೊಡ್ರಿಗಸ್, ಅಮೃತ ಬಿಂದೆರ್, ಕೃಷ್ಣ ಸಾಗರ್ ರಾವ್, ರಾಜ್ ಪಾಮ್ನಾನಿ, ಸಂಜು ವರ್ಮ ಅವರು ನವ ಭಾರತ ನಿರ್ಮಾಣದ ಬಗ್ಗೆ ಹಾಗು ಮೋದಿಯ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಯುಎಇಯ ಸ್ಥಳೀಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments are closed.