ಕರಾವಳಿ

ಮಂಗಳೂರಿನಲ್ಲಿ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಜೆಡಿಎಸ್ ಪ್ರಚಾರ ಆರಂಭ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವಂಸತ ಪೂಜಾರಿ ರವರ ನೇತೃತ್ವದಲ್ಲಿ ಪಕ್ಷದ ಕಛೇರಿಯಿಂದ ಮನೆ.ಮನೆ.ವಾರ್ಡ್ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ನಂತರ ಕುದುಕೋರಿ ಗುಡ್ಡೆ ಕಂಕನಾಡಿಯ ಮನೆಗಳಿಗೆ ಭೇಟಿ ನೀಡಿ ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ತಿಳಿಸಿಲಾಯಿತು.

ಈ ಸಂದರ್ಭದಲ್ಲಿ ಪರಿಸರದ ಜನರು ಪಂಪುವೆಲ್ ಮೇಲ್ಸೇತುವೆ ಸೇರಿದಂತೆ ಸಂಸದರ ವೈಫಲ್ಯಗಳ ಬಗ್ಗೆ ತಿಳಿಸಿ ನಮ್ಮ ಭಾಗದಲ್ಲಿ ಯಾವುದೇ ಕೆಲಸ ಮಾಡದೆ ಕದ್ದು ತಿರುಗುವ ಕೆಲಸ ಮಾಡುತ್ತಿದ್ದರೆ ಎಂದು ಆರೋಪಿಸಿದ್ದಾರೆ ಎಂದು ಜೆಡಿ ಎಸ್ ಮುಖಂಡರು ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷರಾದ ರಾಮ್ ಗಣೇಶ್.ವಕ್ತಾರಾದ ಸುಶೀಲ್ ನೋರೋನ.ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ.ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಎನ್.ಪಿ ಪುಷ್ಪರಾಜನ್.ಮೀನುಗಾರಿಕೆ ಅಧ್ಯಕ್ಷ ರತ್ನಕಾರ್ ಸುವರ್ಣ.ಮಹಿಳಾ ಅಧ್ಯಕ್ಷರಾದ ಸುಮತಿ ಹೆಗ್ಡೆ. ಜಿಲ್ಲಾ ನಾಯಕರಾದ ಫೈಜಾಲ್ ರೆಹಮ್ಮಾನ್ ಇಝಾ ಬಜಾಲ್.ಜೆ ಇಂಬ್ರಾಹಿ. ರಘನಂದನ್.ಲತ್ತಿಪ್.ಶಾಲಿನಿ ರೈ.ಪ್ರವೀಣ್ ಕುಮಾರ್.ಕವಿತಾ.ಲತಾ.ಸುಕಲತಾ.ಅರೀಫ್.ಪಾಯಾಜ್.ಬಶೀರ್ ಬಜಾಲ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.