ಕರಾವಳಿ

ನಂದಾವರ ದೇವಸ್ಥಾನ ಹಾಗೂ ಮೂಡಬಿದ್ರೆ ಹನುಮಾನ್ ದೇವಸ್ಥಾನಕ್ಕೆ ಮಿಥುನ್ ರೈಭೇಟಿ

Pinterest LinkedIn Tumblr

ಮಂಗಳೂರು : ದ.ಕ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರು ನಂದಾವರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರೊಂದಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ತುಂಬೆ, ಎ.ಪಿ.ಯಂ.ಸಿ ಅಧ್ಯಕ್ಷ .ಪದ್ಮನಾಭ ರೈ, ಯುವಕಾಂಗ್ರೆಸ್ ಮುಖಂಡ ಲುಕ್ಮಾನ್, ಸಂಜೀವ ಪೂಜಾರಿ , ರಿಯಾಜ್ ಬಂಟ್ವಾಳ್ ಹಾಗೂ ದೇವಸ್ಥಾನದ ಟ್ರಸ್ಥಿಗಳು ಉಪಸ್ಥಿತರಿದ್ದರು.

ಮೂಡಬಿದ್ರೆಯ ಹನುಮಾನ್ ದೇವಸ್ಥಾನಕ್ಕೆ ಬೇಟಿ :

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ಎಂ ರೈ ಮೂಡಬಿದ್ರೆಯ ಹನುಮಾನ್ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಪ್ರಚಾರ ಕಾರ್ಯ ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಅವರ ಜೊತೆ ಮಾಜಿ ಸಚಿವರೂ ಹಾಗೂ ಜೆಡಿ‌ಎಸ್‌ನ ಹಿರಿಯ ಮುಖಂಡರಾದ ಅಮರನಾಥ್ ಶೆಟ್ಟಿ ಹಾಗೂ ಪಕ್ಷದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.