ಕರಾವಳಿ

ಮಹಿಳೆಗೆ ಹಲ್ಲೆ ನಡೆಸಿ ಮೂಗಿನ ಮೂಳೆ ಮುರಿದ ಆರೋಪಿಗೆ ಶಿಕ್ಷೆ

Pinterest LinkedIn Tumblr

ಉಡುಪಿ: ಆಗಸ್ಟ್ 26, 2012 ರಂದು ರಾತ್ರಿ ಹಿರಿಯಡ್ಕದ ಅಂಜಾರು ಗ್ರಾಮದ ಓಂತಿಬೆಟ್ಟು ಶಾಲೆಯ ಹತ್ತಿರ ವಾಸವಾಗಿರುವ ಆರೋಪಿಯಾದ ಸುರೇಶ್ ಇವನು ಫಿರ್ಯಾದಿಯಾದ ಹೆಚ್. ಹರೀಶ್ ಇವರ ತಾಯಿ ಅಂಜಾರು ಗ್ರಾಮದ ಓಂತಿಬೆಟ್ಟು ಶಾಲೆಯ ಸಮೀಪದ ನಿವಾಸಿಯಾಗಿರುವ ಸುಶೀಲ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಲ್ಲಿ ಕಲ್ಲಿನಿಂದ ಮುಖಕ್ಕೆ ಹೊಡೆದು, ಮೂಗಿನ ಮೂಳೆಯನ್ನು ಮುರಿದು ಹಾಕಿ ತೀವ್ರ ಸ್ವರೂಪದ ಗಾಯಗೊಳಿಸಿರುವ ಬಗ್ಗೆ ಭಾ.ದಂ.ಸಂ: ಕಲಂ: 504 ಮತ್ತು 326ರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಈ ಬಗ್ಗೆ ಹಿರಿಯಡ್ಕ ಠಾಣೆಯ ಉಪ ನಿರೀಕ್ಷಕರಾಗಿದ್ದ ಬಿ. ಲಕ್ಷ್ಮಣ್ ಅವರು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಉಡುಪಿ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಇರ್ಫಾನ್ರವರು ಆರೋಪಿತನಿಗೆ ಭಾ.ದಂ.ಸಂ.ಕಲಂ. 504 ಮತ್ತು 326 ರಡಿ 3 ವರ್ಷದ ಶಿಕ್ಷೆ ಮತ್ತು 3,000 ರೂ. ದಂಡ ವಿಧಿಸಿ, ಏಪ್ರಿಲ್ 4 ರಂದು ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕು. ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.