ಕರಾವಳಿ

ವಾಹನಗಳ ಹಿಂಭಾಗ ಮತ್ತು ಮುಂಭಾಗದಲ್ಲಿ ಜಾಹೀರಾತು ಪ್ರದರ್ಶನ ಮಾಡಿದರೆ ಪ್ರಕರಣ ದಾಖಲು :ಡಿಸಿ

Pinterest LinkedIn Tumblr

ಮಂಗಳೂರು : ವ್ಯಾಪಾರ ಮತ್ತು ವ್ಯಕ್ತಿಗಳ, ಪಕ್ಷಗಳ ಜಾಹೀರಾತು ಅಥವಾ ಧ್ಯೆಯೋಕ್ತಿ (ಸ್ಲೋಗನ್)ಗಳನ್ನು ವಾಹನದ ಹಿಂಭಾಗ ಮತ್ತು ಮುಂಭಾಗದಲ್ಲಿ ಪ್ರದರ್ಶನ ಮಾಡಿದರೆ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಸಿದ್ದಾರೆ.

ಸೂಕ್ತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಖಾಸಗಿ ಮತ್ತು ಇತರ ವಾಹನಗಳಲ್ಲಿ ಈ ರೀತಿಯಾಗಿ ವ್ಯಾಪಾರ ಮತ್ತು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಯಾವುದೇ ಜಾಹೀರಾತು ಅಥವಾ ಧ್ಯೆಯೋಕ್ತಿಗಳನ್ನು ಪ್ರದರ್ಶಿಸುವುದು ಅಪರಾಧವಾಗಿದೆ.

ಚುನಾವಣಾ ಸಮಯದಲ್ಲಿ ಈ ರೀತಿಯ ಉಲ್ಲಂಘನೆಗಳು ಕಂಡುಬಂದಲ್ಲಿ ಯಾವುದೇ ಮರುನೋಟಿಸ್ ನೀಡದೆ ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ ವಾಹನವನ್ನು ಮುಟ್ಟುಗೋಲು ಹಾಕಿ ಕಾನೂನು ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ನೋಡಲ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.