ಕರಾವಳಿ

ಕುಖ್ಯಾತ ರೌಡಿ ಭೂಗತ ಪಾತಾಕಿ ವಿಕ್ಕಿ ಶೆಟ್ಟಿ ಸಹಚರ ಆಕಾಶ್ ಭವನ ಶರಣ್ ಬಂಧನ

Pinterest LinkedIn Tumblr

ಮಂಗಳೂರು, ಎಪ್ರಿಲ್.೦೪: ಬಾಲಕಿಯ ಅತ್ಯಾಚಾರ ಪ್ರಕರಣ ಸೇರಿದಂತೆ 18ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಭೂಗತ ಪಾತಾಕಿ ವಿಕ್ಕಿ ಶೆಟ್ಟಿ ಸಹಚರ ಆಕಾಶ್ ಭವನ ಶರಣ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೊಲೆ, ಕೊಲೆ ಯತ್ನ,ಅತ್ಯಾಚಾರ, ಸುಲಿಗೆ,ಬ್ಲ್ಯಾಕ್‌ಮೈಲ್ ಸೇರಿದಂತೆ 18ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿ ಶೀಟರ್ ಶರಣ್ ಕಳೆದ ಕೆಲವು ತಿಂಗಳುಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ಭೂಗತನಾಗಿದ್ದ.

ಹಳೇ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕೆಲವು ಸಮಯಗಳಿಂದ ಜೈಲಿನಲ್ಲಿದ್ದ ಶರಣ್ ಜೈಲಿನಿಂದ ಹೊರಬಂದ ಬಳಿಕ ಬಾಲಕಿ ಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಾಗಿತ್ತು. ಆರೋಪಿ ಶರಣ್ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ ಸೇರಿದಂತೆ ಪೊಕ್ಸೋ ಕಾಯ್ದೆಯಡಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶರಣ್ ಹುಲಿವೇಷ ತರಬೇತಿ ನೀಡುತ್ತಿದ್ದು ಹುಲಿವೇಷ ಕುಣಿತದ ತರಬೇತಿ ಸಂದರ್ಭ ತರಬೇತಿಗಾಗಿ ಬಂದಿದ್ದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಜಿಲ್ಲೆಯ ಹೊರಗಿನ ಲಾಡ್ಜ್‌ವೊಂದಕ್ಕೆ ಕರೆದೊಯ್ದು ಅಲ್ಲಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾನೆ. ಅತ್ಯಾಚಾರದ ಬಳಿಕ ಬಾಲಕಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು

ಅತ್ಯಾಚಾರದ ಬಗ್ಗೆ ಜನವರಿ 7ರಂದು ಶರಣ್ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಶರಣ್ ವಿರುದ್ಧ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಘಟನೆ ಬಳಿಕ ಶರಣ್ ತಲೆಮರೆಸಿಕೊಂಡಿದ್ದು, ಇದೀಗ ಶರಣ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿ ಶೀಟರ್ ಆಗಿರುವ ಆಕಾಶಭವನ ಶರಣ್ ವಿರುದ್ಧ ಸುಳ್ಯದ ಕೆವಿಜಿ ಸಂಸ್ಥೆಯ ಡಾ.ರಾಮಕೃಷ್ಣ ಹತ್ಯೆ ಪ್ರಕರಣ ಸೇರಿದಂತೆ ಕೊಲೆ ಮತ್ತು ಕೊಲೆ ಯತ್ನ, ಸುಲಿಗೆ,ಬ್ಲ್ಯಾಕ್‌ಮೈಲ್, ಮಹಿಳೆಯೋರ್ವರ ಅತ್ಯಾಚಾರ ಸಹಿತ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.