ಕರಾವಳಿ

ಮಂಗಳೂರಿನಲ್ಲಿ ಮೆ ಭೀ ಚೌಕಿಧಾರ್ ರ್‍ಯಾಲಿ : ನಳಿನ್ ಕುಮಾರ್ ಬೆಂಬಲಿಸಿ ಪೇಟ ತೊಟ್ಟು ಹೆಜ್ಜೆ ಹಾಕಿದ ಕಾರ್ಯಕರ್ತರು

Pinterest LinkedIn Tumblr

ಮಂಗಳೂರು: ಮಂಗಳೂರು ನಗರ ದಕ್ಷಿಣ ಮಂಡಲದ ಉತ್ತರ ಮಹಾ ಶಕ್ತಿ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ಚೌಕಿಧಾರ್ ಶ್ರೀ ನರೇಂದ್ರ ಮೋದಿ ಯವರನ್ನು ಬೆಂಬಲಿಸಿ ಮಂಗಳವಾರ ಸಂಜೆ ಬಿಜೆಪಿ ಕಾರ್ಯಕರ್ತರು ಪೇಟ ತೊಟ್ಟು ದ ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ನಳೀನ್ ಕುಮಾರ್ ಕಟೀಲ್ ಪರವಾಗಿ ಚುನಾವಣಾ ಪ್ರಚಾರ ಮಾಡುವ ಮೂಲಕ ಮತಯಾಚನೆ ಮಾಡಿದರು.

ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉತ್ತರ ಮಹಾ ಶಕ್ತಿಕೇಂದ್ರದ ವತಿಯಿಂದ ನಡೆದ ಮೈ ಭಿ ಚೌಕಿದಾರ್ ಹೂಂ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಪ್ರತಾಪ ಸಿಂಹ ನಾಯಕ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪೇಟಾ ಧರಿಸಿದ ಸುಮಾರು 500 ಕ್ಕೂ ಅಧಿಕ ಕಾರ್ಯಕರ್ತರು ಮೈ ಭಿ ಚೌಕಿದಾರ್ ಹೂ ಎನ್ನುತ್ತಾ ಹೆಜ್ಜೆ ಹಾಕಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಹೊರಟ ಪಾದಯಾತ್ರೆಯು ಸೆಂಟ್ರಲ್ ಮಾರ್ಕೇಟ್ ಮೂಲಕ ಸಾಗಿ ರಥಬೀದಿಯಲ್ಲಿ ಸಮಾಪನಗೊಂಡಿತು.

ಪಾದಯಾತ್ರೆಯಲ್ಲಿ ಮಂಡಲದ ಉತ್ತರ ಮಹಾ ಶಕ್ತಿ ಕೇಂದ್ರದ ಎಲ್ಲಾ ಮನಪಾ ಸದಸ್ಯರು, ವಿವಿಧ ಮೋರ್ಛಾಗಳ ಪದಾಧಿಕಾರಿಗಳು, ಕಾರ್ಯಕರ್ತರು, ಹಾಗೂ ಪಕ್ಷದ ಹಿತೈಷಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Comments are closed.