ಕರಾವಳಿ

ಮಂಡ್ಯ ಜನ ಹಾಗೆಲ್ಲ ಮೋಸ ಹೋಗಲ್ಲ : ಧರ್ಮಸ್ಥಳದಲ್ಲಿ ಸುಮಲತಾ ಅಂಬರೀಷ್ ತಿರುಗೇಟು

Pinterest LinkedIn Tumblr

ಮಂಗಳೂರು : ಮಂಡ್ಯದಲ್ಲಿ ಸುಮಲತಾ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ, ಮಂಡ್ಯ ಜನರೆಲ್ಲರಿಗೂ ಗೊತ್ತು ನಾನ್ಯಾರು ಅಂತಾ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಅಂಬರೀಶ್ ಬ್ಯಾಲೆಟ್ ಪೇಪರ್ ಗೊಂದಲ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಪರಿಚಯ ಇಲ್ಲದ ಪ್ರೊಫೈಲ್ ಅಲ್ಲ ನನ್ನದು . ಮಂಡ್ಯ ಜನರೆಲ್ಲರಿಗೂ ಗೊತ್ತು ನಾನ್ಯಾರೆಂದು. ಜನ ಹಾಗೆಲ್ಲ ಮೋಸ ಹೋಗಲ್ಲ. ಈ ತಂತ್ರಗಾರಿಕೆ ಮಾಡಿದವರು ಅಂದುಕೊಂಡಿರುವ ರೀತಿಯಲ್ಲಿ ಇದೆಲ್ಲಾ ವರ್ಕೌಟ್ ಆಗಲ್ಲ ಎಂದು ಟೀಕಿಸಿದರು.

ಈ ಹಿಂದೆ ರೈತ ಸಂಘದ ಪುಟ್ಟಣ್ಣಯ್ಯರ ವಿರುದ್ಧ ಇದೇ ತಂತ್ರ ಮಾಡಲಾಗಿತ್ತು. ಆದರೆ ಚುನಾವಣೆಯಲ್ಲಿ ಪುಟ್ಟಣ್ಣಯ್ಯ ಆರಾಮಾಗಿ ಗೆದ್ದು ಬಂದಿದ್ದರು. ಹಾಗಾಗಿ ಈ ತಂತ್ರಗಾರಿಕೆ ವರ್ಕೌಟ್ ಆಗಲ್ಲ ಎಂದು ಸುಮಲತಾ ಹೇಳಿದರು.

ಈ ವೇಳೆ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಸುಮಲತಾ ಅಂಬರೀಶ್ ಜತೆಗಿದ್ದರು.

Comments are closed.