ಕರಾವಳಿ

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಶ್ರೀ ಮುಖ್ಯಪ್ರಾಣಾ ಹಾಗೂ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸೋಮವಾರ ನಗರದ ಬಜಿಲಕೇರಿಯ ಶ್ರೀ ಮುಖ್ಯಪ್ರಾಣಾ ದೇವಸ್ಥಾನ ಹಾಗೂ ಕಾರ್ ಸ್ಟ್ರೀಟ್ ನ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದರು.

ಇದೇ ವೇಳೆ ಕಾರ್‌ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಗೋಶಾಲೆಗೂ ಮಿಥುನ್ ರೈ ಅವರು ಭೇಟಿ ನೀಡಿ ಗೋವುಗಳಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭ ಮಿಥುನ್ ರೈ ಅವರೊಂದಿಗೆ ಮಾಜಿ ಕೋರ್ಪೊರೇಟರ್ ರಾಮ್‍ದಾಸ್ ನಾಯಕ್, ಪಕ್ಷದ ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ಸುರೇಂದ್ರ ಶೆಣೈ, ಪಧ್ಮನಾಭ ಅಮೀನ್, ಸಮರ್ಥ್ ಭಟ್ , ಡಿ.ಡಿ ಕಟ್ಟೆಮಾರ್ , ಬಿ .ವಿ ಆಚಾರ್‍ಯ, ಶಾಂತಲಾ ಗಟ್ಟಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಅಭಿಮಾನಿಗಳು ಜೊತೆಗಿದ್ದರು.

Comments are closed.